Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ನಲ್ಲಿ ಊರಿಗೆ ಹೊರಟವರು ಯಾರು?

ಲಾಕ್ ಡೌನ್ ನಲ್ಲಿ ಊರಿಗೆ ಹೊರಟವರು ಯಾರು?
ಕಾರವಾರ , ಬುಧವಾರ, 29 ಏಪ್ರಿಲ್ 2020 (14:47 IST)
ಲಾಕ್ ಡೌನ್ ನಲ್ಲಿ ಈ ಮಂದಿ ತಮ್ಮ ತಮ್ಮ ಊರಿನತ್ತ ಹೊರಟಿದ್ದಾರೆ.  

ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಉತ್ತರ ಕನ್ನಡ ಜಿಲ್ಲಾಡಳಿತದಿಂದ ವಿಶೇಷ ಬಸ್‌ಗಳ ಮೂಲಕ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.

ಚಿಕ್ಕಬಳ್ಳಾಪುರ, ಬೀದರ್, ರಾಯಚೂರು, ಸುರಪುರ, ಸಿಂದಗಿ, ಕುಷ್ಟಗಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಂತಹ ಸುಮಾರು 242 ವಲಸೆ ಕಾರ್ಮಿಕರು ಜಿಲ್ಲೆಯ ಕಾರವಾರ, ಮುರುಡೇಶ್ವರ ಹಾಗೂ ಜೊಯೀಡಾದಲ್ಲಿ ಅತಂತ್ರರಾಗಿದ್ದರು. ಇವರೆಲ್ಲರನ್ನು ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾಡಳಿತವು ಒಟ್ಟು 12 ವಿಶೇಷ ಬಸ್‌ಗಳ ಮೂಲಕ ವಲಸೆ ಕಾರ್ಮಿಕರ ಸ್ವಂತ ಊರಿಗೆ ಕಳುಹಿಸಿಕೊಟ್ಟಿದೆ.

ಉಪವಿಭಾಗಾಧಿಕಾರಿ ಎಂ. ಪ್ರಿಯಾಂಗಾ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾಡಳಿವು ಎಲ್ಲಾ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ವಿಶೇಷ ಬಸ್‌ಗಳ ಮೂಲಕ ಕಳುಹಿಸಿಕೊಡುತ್ತಿದೆ. ಈ ಬಗ್ಗೆ ಅಲ್ಲಿನ ಜಿಲ್ಲಾಡಳಿತಕ್ಕೂ ಮಾಹಿತಿ ನೀಡಿದ್ದೇವೆ.  ಒಂದು ಬಸ್‌ನಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು 20 ಜನರನ್ನು ಮಾತ್ರ ಕಳುಹಿಸುತ್ತಿದ್ದೇವೆ ಎಂದಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಉಲ್ಲಂಘಿಸಿ ನಮಾಜ್ : ಮಸೀದಿಯಲ್ಲಿದ್ದ 15 ಜನರ ಬಂಧನ