Select Your Language

Notifications

webdunia
webdunia
webdunia
webdunia

ಗೋವಿದರಾಜನಗರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ನಾಮಪತ್ರ ಸಲ್ಲಿಸಿ

Govidarajanagar Congress candidate Priyakrishna submit nomination
bangalore , ಬುಧವಾರ, 19 ಏಪ್ರಿಲ್ 2023 (20:25 IST)
ವಿಧಾನಸಭೆ ಚುನಾವಣೆ ಹಿನ್ನೆಲೆ ಗೋವಿದರಾಜನಗರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ನಾಮಪತ್ರ ಸಲ್ಲಿಸಿದ್ದಾರೆ. ಮೊದಲಿಗೆ ಗಣಪತಿ, ಗೋವಿಂದರಾಜ ಸ್ವಾಮಿ ದೇವಾಲಯದಲ್ಲಿ ಪ್ರಿಯಾಕೃಷ್ಣ ವಿಶೇಷ ಪೂಜೆ ಸಲ್ಲಿಸಿದರು.‌ ನಂತರ ಸಾವಿರಾರು ಕಾರ್ತಯಕರ್ತರೊಂದಿಗೆ ಮೆರವಣಿಗೆ ಹೊರಟು ಕ್ಷೇತ್ರದಲ್ಲೆಡೆ ಶಕ್ತಿ ಪ್ರದರ್ಶನ ಮಾಡಿದರು. ದಾರಿಯೂದ್ದಕ್ಕೂ ಕೈ ಕಾರ್ಯಕರ್ತರು ಹೂವಿನ ಹಾರ ಹಾಕಿ ಕುಣಿದು ಕುಪ್ಪಳಿಸಿದರು. ನಿನ್ನೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಪ್ರಿಯಾಕೃಷ್ಣ ‌ಇಂದು ಅಧಿಕೃತವಾಗಿ ಉಮೇದುವಾರಿಕೆ ಸಲ್ಲಿಸಿ ಚುನಾವಣೆಗೆ ರಂಗು ಹೆಚ್ಚಿಸಿದರು. ಸದ್ಯ ಬಿಜೆಪಿಯಿಂದ ಸೋಮಣ್ಣ ಗೋವಿಂದರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸದ ಹಿನ್ನೆಲೆ ಪ್ರಿಯಾಕೃಷ್ಣ ಭರ್ಜರಿ ಗೆಲುವಿನ ನೀರಿಕ್ಷೆಯಲ್ಲಿದ್ದಾರೆ. ನಂತರ ಮಾತನಾಡಿದ ಪ್ರಿಯಾಕೃಷ್ಣ, ನಾನು ಈ ಬಾರಿ ಒಂದು‌ ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ.. ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ.. ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಕ್ಕೆ ಕರೆತರಗಿಲಾಗಿದ್ಯಂತೆ 60 ಕ್ಕೂ ಹೆಚ್ಚು ಹೆಲಿಕಾಪ್ಟರ್