Select Your Language

Notifications

webdunia
webdunia
webdunia
webdunia

ಮಹದೇವಪು ಕ್ಷೇತ್ರದಿಂದ ಮಂಜೂಳ ಲಿಂಬಾವಳಿ ಹಾಗೂ ಬೈರತಿ ಬಸವರಾಜ್ ನಾಮಪತ್ರ ಸಲ್ಲಿಕೆ

ಮಹದೇವಪು ಕ್ಷೇತ್ರದಿಂದ ಮಂಜೂಳ ಲಿಂಬಾವಳಿ ಹಾಗೂ ಬೈರತಿ ಬಸವರಾಜ್ ನಾಮಪತ್ರ ಸಲ್ಲಿಕೆ
bangalore , ಬುಧವಾರ, 19 ಏಪ್ರಿಲ್ 2023 (17:40 IST)
ರಾಜ್ಯದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಎರಡು ದಿನಗಳು ಭಾಕಿ ಉಳಿದಿದ್ದು, ಮಂಗಳವಾರ ದಿನವಾದ ಇಂದು ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ರವರು ಸಾವಿರಾರು ಬೆಂಬಲಿಗರೊಂದಿಗೆ  ಓಲ್ಡ್ ಮದ್ರಾಸ್ ರಸ್ತೆಯ ಐಟಿಐ ಗೇಟ್ ನಿಂದ ಬೃಹತ್ ರ‌್ಯಾಲಿ ನಡೆಸಿಕೊಂಡು ಬಂದು ಕೆ.ಆರ್.ಪುರ ಬಿಬಿಎಂಪಿ ಕಚೇರಿಯಲ್ಲಿ ಚುನಾವಣ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರೆ, ಮಹದೇವಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಅರವಿಂದ ಲಿಂಬಾವಳಿ ರವರ ಪತ್ನಿ ಶ್ರೀಮತಿ ಎಸ್. ಮಂಜೂಳ ಲಿಂಬಾವಳಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಹೆಚ್. ನಾಗೇಶ್ ರವರು ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಅಗಮಿಸಿ ಕೆ.ಆರ್.ಪುರದ ಬಿಇಓ ಕಚೇರಿ ಕಟ್ಟಡದಲ್ಲಿ ನಿರ್ಮಿಸಿರುವ ಆರ್.ಓ ಕಚೇರಿಯಲ್ಲಿ ಚುನಾವಣಾದಿಕಾರಿ ಮಹೇಶ್ ರವರಿಗೆ ನಾಮಪತ್ರ ಸಲ್ಲಿಸಿ ಗೆಲುವುನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆ.ಆರ್.ಪುರ ಹಾಗೂ ಮಹದೇವಪುರ ಎರಡು ಕ್ಷೇತ್ರಗಳ ಚುನಾವಣಾದಿಕಾರಿಗಳ ಕಚೇರಿಗಳು ಕೆ.ಆರ್.ಪುರ ಮುಖ್ಯರಸ್ತೆಯಲ್ಲಿ ಇರುವುದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸಾವಿರಾರು ಕಾರ್ಯಕರ್ತರೊಂದಿಗೆ ಆಗಮಿಸಿದ್ದರಿಂದ ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಸುಡುಬಿಸಿಲಿನ ನಡುವೆ ತೊಂದರೆ ಅನುಭವಿಸುವಂತಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸೇರಿದವರು ರಾಮಮಂದಿರ ವಿರೋಧಿಗಳು : ಶೆಟ್ಟರಿಗೆ ಶೋಭಾ ಟಾಂಗ್