Publish Date: Wed, 29 May 2019 (15:36 IST)
Updated Date: Wed, 29 May 2019 (15:38 IST)
ಶಾಸಕರ ಅಭಿಪ್ರಾಯ ಎಲ್ಲವನ್ನೂ ಚರ್ಚೆ ಮಾಡುತ್ತೇವೆ. ರಾಜ್ಯದ ಜನರಿಗೆ ನಮ್ಮ ಅಭಿವೃದ್ಧಿ ಕಾರ್ಯಗಳು ತಲುಪಬೇಕು. ಸರಕಾರಕ್ಕೆ ಧಕ್ಕೆ ಇಲ್ಲ. ಮುಂದಿನ ಹೆಜ್ಜೆ ನೋಡಿ ಇಡುತ್ತೇವೆ ಅಂತ ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದು, ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮಲ್ಲಿ
ಯಾರೂ ಅತೃಪ್ತರೂ ಇಲ್ಲ ಸಂತೃಪ್ತರೂ ಇಲ್ಲ ಎಂದಿದ್ದಾರೆ.
ಯಾರೊಬ್ಬರು ಮಂತ್ರಿ ಆಗಬೇಕು, ಅಧಿಕಾರ ಸಿಗಬೇಕು ಅನ್ನೋದಕ್ಕಲ್ಲ ಜನ ನಮ್ಮನ್ನು ಆರಿಸಿ ಕಳಿಸಿರೋದು. ಸುಮ್ನೆ ಊಹಾಪೋಹಗಳು ಎಲ್ಲ ಎಂದರು.
ಮೈತ್ರಿ ಸರ್ಕಾರ ಸ್ಥಿರವಾಗಿದೆ. ಯಾರ ಬಗ್ಗೆಯೂ ಕೂಡ ನಮಗೆ ಅನುಮಾನವಿಲ್ಲ. ಸರ್ಕಾರದ ಇಮೇಜ್ ಜನರಿಗೆ ಒಳ್ಳೆಯದಾಗಿ ತಲುಪಬೇಕು. ಸಂಪುಟ ವಿಸ್ತರಣೆ ಬಗ್ಗೆ ನಾನು ಏನೂ ಹೇಳುವುದಕ್ಕೆ ಹೋಗೋದಿಲ್ಲ.
ಯಾವ ರೀತಿ ಮಾಡಬೇಕು? ಏನು ಮಾಡಬೇಕು? ಅಂತ ನಿರ್ಧಾರ ಮಾಡ್ತೇವೆ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.