ಇನ್‌ಸ್ಟಾಗ್ರಾಂನ ಹೊಸ ಗೂಗಲ್ Gemini Nano Banana AI ಸೀರೆ ಲುಕ್‌ಗೆ ಯುವತಿಯರು ಫುಲ್ ಫಿದಾ ಆಗಿದ್ದಾರೆ.
ತಮ್ಮ ಸೆಲ್ಫಿಗಳನ್ನು ರೆಟ್ರೊ ಬಾಲಿವುಡ್-ಶೈಲಿಯ ಲುಕ್‌ನಲ್ಲಿ ನೋಡಿ ಯುವತಿಯರು ಫುಲ್ ಖುಷಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಶುರುವಾದ ಈ ಕ್ರೇಜ್‌ಗೆ ಹಳ್ಳಿಯಿಂದ ಪಟ್ಟಣದವರೆಗಿನ ಯುವತಿಯರು ಅಪ್ಡೇಟ್ ಆಗಿದ್ದು, ಸೀರೆ ಲುಕ್‌ನಲ್ಲಿ ತಮ್ಮ ನೋಡಿ ಖುಷಿಯಾಗುತ್ತಿದ್ದಾರೆ.
ಬಳಕೆದಾರರ ಸಾಮಾನ್ಯ ಲುಕ್‌ಗಳು ಗೂಗಲ್ ಜೆಮಿನಿ ನ್ಯಾನೋ ಬನಾನಾ ಎಐ ಸೀರೆಯಲ್ಲಿ ಮತ್ತೇ ಮತ್ತೇ ನೋಡುವಂತೆ ಮಾಡಿಸುತ್ತಿದೆ.
ಇದೀಗ ಈ ಕ್ರೇಜ್ AI ಇಮೇಜ್ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಎಐ ಸೀರೆ ಸಂಪಾದನೆಯನ್ನು ರಚಿಸಿದ ನಂತರ ಗೊಂದಲದ ಅನುಭವವನ್ನು ಹಂಚಿಕೊಂಡಿದ್ದಾರೆ.
ಆದರೆ ಇದು ಎಐ ಮೂಲಕ ಆಗಿರುವುದರಿಂದ ಯುವತಿಯರು ಈ ವಿಚಾರದಲ್ಲಿ ಎಚ್ಚರದ ಹೆಜ್ಜೆಯಿಡುವುದು ಉತ್ತಮ.
ಕೆಲವರು ನಿಮ್ಮನ್ನು ಅಷ್ಟೂ ಚೆನ್ನಾಗಿ ಕಾಣಿಸುವ ಹಾಗೇ ಮಾಡುವ ತಂತ್ರಜ್ಞಾನಕ್ಕೆ ಅದನ್ನು ಬೇರೆ ರೀತಿಯಲ್ಲೂ ಉಪಯೋಗಿಸಲು ಗೊತ್ತು ಎಂಬ ಸಂದೇಶವನ್ನು ಹೇಳಿಕೊಂಡಿದ್ದಾರೆ. ಆದ್ದರಿಂದ ಎಐ ಮೂಲಕ ತಮ್ಮ ಪೋಟೋ ಎಡಿಟ್ ಮಾಡಿಕೊಳ್ಳುವ ಹೆಣ್ಣು ಮಕ್ಕಳು ಈ ವಿಚಾರದಲ್ಲಿ ಹುಷಾರಗುವುದು ಒಳಿತು. ತಂತ್ರಜ್ಞಾನ ಒಳ್ಳೆಯದು ಅತಿಯಾದರೆ ಅದೇ ಮುಳುವಾಗಬಹುದು.
ವೈರಲ್ ಕ್ರೇಜ್ ಸೈಬರ್ ಸೆಕ್ಯುರಿಟಿ ತಜ್ಞರು ಮತ್ತು ಕಾನೂನು ಜಾರಿಯಿಂದ ಸುರಕ್ಷತಾ ಎಚ್ಚರಿಕೆಗಳನ್ನು ಹುಟ್ಟುಹಾಕಿದೆ. ಐಪಿಎಸ್ ಅಧಿಕಾರಿ ವಿಸಿ ಸಜ್ಜನರ್ ಅವರು ಭಾಗವಹಿಸುವ ಸಂದರ್ಭದಲ್ಲಿ ಬಳಕೆದಾರರು ಜಾಗರೂಕರಾಗಿರಬೇಕು ಎಂದು ಸಾರ್ವಜನಿಕ ಸಲಹೆಯನ್ನು ನೀಡಿದ್ದಾರೆ.