Select Your Language

Notifications

webdunia
webdunia
webdunia
webdunia

GoodNews: ಒಂದನೇ ತರಗತಿ ಸೇರ್ಪಡೆ ವಯೋಮಿತಿ ಗೊಂದಲಕ್ಕೆ ತೆರೆ ಎಳೆದ ಸಚಿವ ಮಧುಬಂಗಾರಪ್ಪ

ಸಚಿವ ಮಧುಬಂಗಾರಪ್ಪ

Sampriya

ಬೆಂಗಳೂರು , ಬುಧವಾರ, 16 ಏಪ್ರಿಲ್ 2025 (16:09 IST)
Photo Credit X
ಬೆಂಗಳೂರು: ಒಂದನೇ ತರಗತಿ ಸೇರ್ಪಡೇ ಬಗ್ಗೆ ಪೋಷಕರಿಗಿದ್ದ ಗೊಂದಲಕ್ಕೆ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದನೇ ತರಗತಿಗೆ  ಸೇರ್ಪಡೆಗೆ ಈ ವರ್ಷ  5 ವರ್ಷ 5 ತಿಂಗಳಾಗಿದ್ದರೂ ಸಹ ಮಕ್ಕಳ ದಾಖಲಾತಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪೋಷಕರ ಕಡೆಯಿಂದ ಬೇಡಿಕೆ ಹೆಚ್ಚಿದ್ದ ಕಾರಣ ಈ ವರ್ಷ ಮಾತ್ರ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಆದರೆ ಮುಂದಿನ ವರ್ಷದಿಂದ ಹಿಂದಿನ ನಿಯಮದಂತೆ 6 ವರ್ಷವೇ ಇರಲಿದೆ ಎಂದಿದ್ದಾರೆ.

ವಯೋಮಿತಿ ವಿಚಾರದಲ್ಲಿ ಪೋಷಕರು ಗೊಂದಲದಲ್ಲಿದ್ದಾರೆ. ದೇಶದಲ್ಲಿ ಎಲ್ಲಾ ಕಡೆ ಒಂದನೇ ತರಗತಿ ಸೇರ್ಪಡೆಗೆ ಆರು ವರ್ಷ ವಯೋಮಿತಿ ಇದೆ. ಎರಡು ತಿಂಗಳು ಮಾತ್ರ ಸಡಿಲಿಕೆ ಮಾಡಬಹುದು. ನಮ್ಮದು ಎಸ್‌ಇಪಿ ಇರುವುದರಿಂದ ಅವರ ಬಳಿ ಕೇಳಿದಾಗ, ಮಕ್ಕಳು ಕಡಿಮೆ ವಯಸ್ಸಿನಲ್ಲೇ ಸೇರಿಕೊಳ್ಳುತ್ತಿದ್ದಾರೆ ಎಂದಿದ್ದರು.

ವಯಸ್ಸಿನ ಮಿತಿಯ ಬಗ್ಗೆ ಒತ್ತಡ ಹೆಚ್ಚಾಗಿದ್ದು, ಈ ಮೂಲಕ ನಾನು ಮನವಿ ಮಾಡುವುದೇನೆಂದರೆ ಮಕ್ಕಳನ್ನು ಯಂತ್ರದ ತರ ಓದಿಸಬೇಡಿ.  ಹಾಗೆ ಮಾಡಿದರೆ ಮಕ್ಕಳಲ್ಲಿ ಒತ್ತಡ ಹೆಚ್ಚಾಗಿ, ಮನಸ್ಸಿಗೆ ಪೆಟ್ಟು ಬೀಳುತ್ತದೆ ಎಂದರು.

ಎಸ್ಇಪಿ ವರದಿ ಆಧಾರದ ಮೇಲಿನ ಕಡ್ಡಾಯ 6 ವರ್ಷ ವಯೋಮಿತಿಯನ್ನು ಸಡಿಲಿಸಲಾಗಿದೆ. ಆದರೆ, ಒಂದನೇ ತರಗತಿ ಸೇರ್ಪಡೆಗೆ ಯುಕೆಜಿ ಆಗಿರಬೇಕು. ಆದರೆ ಇದು ಈ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ. ಮುಂದಿನ ವರ್ಷದಿಂದ ಕಡ್ಡಾಯ ವಯೋಮಿತಿ 6 ವರ್ಷವೇ ಇರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ