Select Your Language

Notifications

webdunia
webdunia
webdunia
webdunia

ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಗುಡ್ ನ್ಯೂಸ್

ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಗುಡ್ ನ್ಯೂಸ್
bangalore , ಬುಧವಾರ, 11 ಅಕ್ಟೋಬರ್ 2023 (20:29 IST)
ಬಿಎಂಟಿಸಿಯಿಂದ ಫೀಡರ್  ವ್ಯವಸ್ಥೆ, ಕಾರ್ಯಕ್ರಮಕ್ಕೆ  ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ರು.ಕೆ.ಆರ್ ಪುರಂ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಹಸಿರು ನಿಶಾನೆ ನೀಡಿದ್ದು,ಉದ್ಘಾಟನೆ ಬಳಿಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೆಆರ್‌ ಪುರ ನಿಲ್ದಾಣಕ್ಕೆ 37 ಬಿಎಂಟಿಸಿ ಫೀಡರ್‌ ಬಸ್ ವ್ಯವಸ್ಥೆ ಮಾಡಿದ್ದೇವೆ.ಅಕ್ಟೋಬರ್ 9ರ ಸೋಮವಾರದಿಂದ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಚಲಘಟ್ಟ-ಕೆಂಗೇರಿ ನಡುವೆ ಮೆಟ್ರೋ ರೈಲುಗಳ ಸಂಚಾರವನ್ನು ಆರಂಭವಾಗಿದೆ.ಇದೀಗ ಬಿಎಂಟಿಸಿ ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಹೆಚ್ಚಿಸಿದೆ.ವಿವಿಧ ಪ್ರದೇಶಗಳಿಂದ 37 ಹೊಸ ಬಿಎಂಟಿಸಿ ಬಸ್‌ಗಳು ಕೆಆರ್ ಪುರ ನಮ್ಮ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುತ್ತವೆ.ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಇತರ ಪ್ರದೇಶಗಳಿಂದ ಕೆಆರ್ ಪುರದ ಮೆಟ್ರೋ ನಿಲ್ದಾಣ ಸಂಪರ್ಕಿಸಲು ಮೆಟ್ರೋ ಫೀಡರ್ ಬಸ್ ಸೇವೆ,ಕೆಆರ್ ಪುರ ಮೆಟ್ರೋ ನಿಲ್ದಾಣ-ಸಿಲ್ಕ್ ಬೋರ್ಡ್‌ ಜಂಕ್ಷನ್ ನಡುವೆ 22  ಬಸ್‌ಗಳು ಸಂಚಾರ ನಡೆಸಲಿವೆ.
 
ವೊಲ್ವೋ ಬಸ್ ಕೆಆರ್ ಪುರ ಮೆಟ್ರೋ ನಿಲ್ದಾಣ-ಸಿಲ್ಕ್ ಬೋರ್ಡ್‌ ಜಂಕ್ಷನ್ ಮಾರ್ಗದಲ್ಲಿ ಹೊರ ವರ್ತುಲ ರಸ್ತೆ, ಮಾರತ್‌ಹಳ್ಳಿ, ಇಬ್ಬಲೂರು ಮೂಲಕ ಸಂಚಾರ ಆರಂಭವಾಗಲಿದೆ.ಪೀಕ್ ಅವರ್ ನಲ್ಲಿ 5 ನಿಮಿಷಕ್ಕೆ, ಸಾಮಾನ್ಯ ಸಮಯದಲ್ಲಿ  8 ನಿಮಿಷಕ್ಕೊಂದು ಬಸ್ ಸೇವೆ ಇರಲಿದೆ.ಕೆಆರ್ ಪುರ-ಸಿಲ್ಕ್ ಬೋರ್ಡ್ ಬೆಂಗಳೂರು ನಗರದ ಅತಿ ಹೆಚ್ಚು ದಟ್ಟಣೆಯ ರಸ್ತೆಗಳಲ್ಲಿ ಒಂದಾಗಿದ್ದು,ಬಿಎಂಟಿಸಿ ಮೆಟ್ರೋ ಫೀಡರ್‌ ಬಸ್‌ಗಳು ದಿನಕ್ಕೆ 300 ರಿಂದ 350 ಟ್ರಿಪ್ ಸಂಚಾರ ನಡೆಸಲಿದ್ದು, ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಮುನಿರತ್ನ