Select Your Language

Notifications

webdunia
webdunia
webdunia
Wednesday, 2 April 2025
webdunia

ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ

BMRCL
bangalore , ಮಂಗಳವಾರ, 3 ಅಕ್ಟೋಬರ್ 2023 (12:39 IST)
ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆ ಬಹುತೇಕ ಹಸಿರು ಮಾರ್ಗದ ಮೆಟ್ರೋ ಸೇವೆ ಸ್ಥಗಿತವಾಗಿದೆ. ಕೇವಲ  ನಾಗಸಂದ್ರದಿಂದ ಯಶವಂತಪುರ ಹಾಗೂ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ವರೆಗೆ ಮಾತ್ರ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಲಭ್ಯವಾಗಿದೆ.ಪ್ರಯಾಣಿಕರು ಸಹಕರಿಸುವಂತೆ ನಮ್ಮ ಮೆಟ್ರೋ ಪ್ರಯಾಣಿಕರಲ್ಲಿ ಮನವಿ ಮಾಡಿದ್ದು,ಪ್ರಯಾಣಿಕರಿಗೆ BMRCL  ಮಾಹಿತಿ ನೀಡಿದೆ.

ರೀ ರೈಲ್ ವಾಹನ ಆಯತಪ್ಪಿದ ಹಿನ್ನಲೆ ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಅದನ್ನು ಸರಿಪಡಿಸಲು ಬಳಸಲಾಗುತ್ತದೆ.ರೀ ರೈಲ್ ಟ್ರ್ಯಾಕ್ ತಪ್ಪಿ ಭಾರೀ ತೊಂದರೆಯಾಗಿರುವ ಘಟನೆ ರಾಜಾಜಿನಗರ ನಿಲ್ದಾಣದ ಕರ್ವ್ ನಲ್ಲಿ ನಡೆದಿದೆ.ನಾಗಸಂದ್ರದಿಂದ ರೇಷ್ಮೆ ಸಂಸ್ಥೆವರೆಗಿನ ಟ್ರ್ಯಾಕ್ ನಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ.ಏಕಮುಖವಾಗಿ ಮಾತ್ರ ಸಂಚರಿಸುತ್ತಿರುವ ರೀ ರೈಲ್ ವಾಹನವನ್ನು‌ ಹಳಿಗೆ ತರಲು ಹರಸಾಹಸ ಪಾಡಲಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿತೃ ಪಕ್ಷದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲ್ವಂತೆ!