Select Your Language

Notifications

webdunia
webdunia
webdunia
webdunia

ನಮ್ಮ ಮೆಟ್ರೋದಲ್ಲಿ NCMC ಕಾರ್ಡ್‌ ಮಾರಾಟ

ನಮ್ಮ ಮೆಟ್ರೋದಲ್ಲಿ NCMC ಕಾರ್ಡ್‌ ಮಾರಾಟ
bangalore , ಭಾನುವಾರ, 3 ಸೆಪ್ಟಂಬರ್ 2023 (19:47 IST)
ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ರುಪೇ ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯವಾಗ್ತಿದೆ. ಒನ್ ನೇಷನ್ ಒನ್ ಕಾರ್ಡ್ ಅನುಗುಣವಾಗಿ ನ್ಯಾಷನಲ್ ಕಾಮನ್ ಮೊಬಲಿಟಿ ಕಾರ್ಡ್‍ಗೆ ಚಾಲನೆ ಸಿಕ್ಕಿದ್ದು, ಈ ಕಾರ್ಡನ್ನು ರಿಚಾರ್ಜ್ ಮಾಡಿಕೊಂಡು ಮೆಟ್ರೋದಲ್ಲಿ ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲದೆ ಈ ಕಾರ್ಡ್ ಬಳಸಿ ಶಾಪಿಂಗ್ ಕೂಡ ಮಾಡಬಹುದು, ಪೆಟ್ರೋಲ್ ಡೀಸೆಲ್ ಕೂಡ ಖರೀದಿಸಬಹುದು.ನಮ್ಮ ಮೆಟ್ರೋ ದಿನದಿಂದ ದಿನಕ್ಕೆ ಹೊಸ ಸೌಲಭ್ಯಗಳನ್ನು ನೀಡ್ತಾಯಿದ್ದು, ಇನ್ನಷ್ಟು ಹೈಟೆಕ್ ಆಗ್ತಾಯಿದೆ. 

ಇನ್ಮು೦ದೆ ಆ ಟೆನ್ಷನ್ ಬೇಡವೇ ಬೇಡ.. ಇದೀಗ ಬಿ ಎಂ ಆರ್ ಸಿ ಎಲ್ ಕಾಮನ್ ಮೊಬಿಲಿಟಿ ಕಾರ್ಡ್ ಗಳನ್ನ ನಮ್ಮ ಮೆಟ್ರೋ ಸ್ಟೇಷನ್  ಗಳಲ್ಲಿ ನೀಡ್ತಾಯಿದೆ. ಇನ್ನೂ ಈ ಕಾರ್ಡ್ ನ ವಿಶೇಷತೆ ಏನು ಅಂದ್ರೆ ಈಗಾಗಲೇ ಬಳಕೆಯಲ್ಲಿರುವ ಕಾಂಟ್ಯಾಕ್ಟ್ಲೆಸ್‌ ಸ್ಮಾರ್ಟ್‌ ಕಾರ್ಡ್‌ಗಳು ಅಂದರೆ ಸಿಎಸ್‌ಸಿ ಕಾರ್ಡ್ ಗಳು ನಮ್ಮ ಮೆಟ್ರೋ ಪ್ರಯಾಣದಲ್ಲಿ ಮಾತ್ರ ಬಳಸಬಹುದಾಗಿದೆ. ಆದ್ರೆ ಒನ್‌ ನೇಷನ್‌ ಒನ್‌ ಕಾರ್ಡ್‌ಗೆ ಅನುಗುಣವಾಗಿ ಇರುವ ರುಪೇ ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ಗಳು ದೇಶದ ಎಲ್ಲಾ ಸಾರಿಗೆ ಹಾಗೂ ಹೆಚ್ಚುವರಿಯಾಗಿ ರಿಟೇಲ್‌ ಶಾಪ್ಸ್, ಪೆಟ್ರೋಲ್‌ ಬಂಕ್‌, ಟೋಲ್ ಫಿ ಸೇರಿದಂತೆ ಮತ್ತಿತರ ಸೇವೆಗೂ ಈ ಕಾರ್ಡ್ ಅನ್ನು ಬಳಕೆ ಮಾಡಬಹುದಾಗಿದೆ. ಸದ್ಯ ಇದೀಗ ಕಾಮನ್ ಮೊಬಿಲಿಟಿ ಕಾರ್ಡ್ ಬಳಕೆ ಮಾಡಲು ಸಿಲಿಕಾನ್ ಸಿಟಿ ಮಂದಿ ಫುಲ್ ಖುಷಿಯಾಗಿದ್ದರೆ. ಹೊಸದಾಗಿ ಪರಿಚಯವಾಗಿರುವ ಕಾಮನ್ ಮೊಬಿಲಿಟಿ ಕಾರ್ಡ್‌ಗೆ 50 ರೂಪಾಯಿ ದರ ನಿಗದಿ ಯಾಗಿದ್ದು, ಶೇ 5 ರಷ್ಟು ಡಿಸ್ ಕೌಂಟ್ ಕೂಡ ಇರಲಿದೆ. ಎನ್‌ಸಿಎಂ ಕಾರ್ಡ್‌ ಮೆಟ್ರೋ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸಮಯದಲ್ಲಿ ಮಾರಾಟಕ್ಕೆ ಲಭ್ಯವಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೆಂದು ದಿನಕ್ಕೆ ಗಗನಕ್ಕೆ ಏರುತ್ತಿರುವ ತರಕಾರಿ ಬೆಲೆಗಳು