ರಾಜ್ಯದ ಶಾಲಾ ಮಕ್ಕಳಿಗೆ ಇನ್ನೇನು ಫೈನಲ್ ಪರೀಕ್ಷೆಗಳು ಆರಂಭಗೊಳ್ಳಲಿದೆ. ಆದರೆ ಪೋಷಕರು ಆದಷ್ಟು ಬೇಗ ಪರೀಕ್ಷೆ ಮುಗಿದು, ಮಕ್ಕಳಿಗೆ ಬೇಸಿಗೆ ರಜೆ ಸಿಗಲಿ ಎಂದು ಕಾಯುತ್ತಿದ್ದಾರೆ.
ಆದರೆ ಈ ಭಾರಿ ಅವಧಿಗೂ ಮುನ್ನಾ ಬೇಸಿಗೆ ರಜೆ ನೀಡುವ ಸಾಧ್ಯತೆಯಿದೆ. ರಾಜ್ಯದ ಎಲ್ಲೆಡೆ ಬಿಸಿಲ ತಾಪಕ್ಕೆ ಜನರು ಸುಸ್ತಾಗಿ ಹೋಗಿದ್ದಾರೆ. ಇದರಿಂದ ಜನರು ಮನೆಯಿಂದ ಹೊರ ಹೋಗಲು ಹಿಂದೆ ಮುಂದೇ ನೋಡ್ತಾ ಇದ್ದಾರೆ.
ದಿನೇ ದಿನೇ ಬಿಸಿಲ ತಾಪ ಏರುತ್ತಿರುವುದರಿಂದ ಇದೀಗ ಶಾಲೆಗಳಲ್ಲಿ ಪರೀಕ್ಷೆ ಮುಗಿದ ಬೆನ್ನಲ್ಲೇ ಬೇಸಿಗೆ ರಜೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ರಾಜ್ಯದಲ್ಲಿ ಇನ್ನೂ ಕೂಡಾ ಬಿಸಿಲ ತಾಪ ಏರುವ ಸಾಧ್ಯತೆಯಿದೆ. ಆದ್ದರಿಂದ ಆರೋಗ್ಯದ ಕಾಳಜಿಯನ್ನು ಮಾಡುವುದು ತುಂಬಾನೇ ಮುಖ್ಯ.