Select Your Language

Notifications

webdunia
webdunia
webdunia
webdunia

ಆಸ್ತಿ ತೆರಿಗೆ ಕಟ್ಟುವವರಿಗೆ Good News

ಆಸ್ತಿ ತೆರಿಗೆ
ಆಸ್ತಿ ತೆರಿಗೆ ಕಟ್ಟುವವರಿಗೆ ಮಹಾನಗರ ಪಾಲಿಕೆ ಶುಭ ಸುದ್ದಿ ನೀಡಿದೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಣದ ಸಂಬಂಧ ವಿಧಿಸಲಾಗಿರುವ ಲಾಕ್‍ಡೌನ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಚಾಲ್ತಿ ವರ್ಷದ (2020-21ನೇ ಸಾಲಿಗಾಗಿ ಮಾತ್ರ) ಆಸ್ತಿ ತೆರಿಗೆ ಪಾವತಿ ಮೇಲೆ ನೀಡಲಾಗಿರುವ ಶೇ. 5ರ ರಿಯಾಯಿತಿಯ ಅವಧಿಯನ್ನು  ಜುಲೈ 31 ರವರೆಗೆ ವಿಸ್ತರಿಸಲಾಗಿದೆ.

ಹೀಗಂತ ಕಲಬುರಗಿ ಮಹಾನಗರ ಪಾಲಿಕೆ ಅಯುಕ್ತರಾದ ರಾಹುಲ್ ಪಾಂಡ್ವೆ ತಿಳಿಸಿದ್ದಾರೆ.

ಪಾವತಿ ವಿಳಂಬದ ದಂಡವನ್ನು ಜುಲೈ 1 ರಿಂದ ಅನ್ವಯಿಸುವ ಬದಲಾಗಿ 2020 ರ ನವೆಂಬರ್ 1 ರಿಂದ ಅನ್ವಯವಾಗುವಂತೆ ದಂಡವನ್ನು ವಿಧಿಸಲಾಗುತ್ತದೆ. 

ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಆಸ್ತಿಗಳ ಮಾಲೀಕರು, ಅನುಭೋಗದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು.  ಈ ಅವಕಾಶವು ಕೇವಲ 2020-21ನೇ ಸಾಲಿಗಾಗಿ ಮಾತ್ರ ಅನ್ವಯಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ನಂಜು : ಕಲಬುರಗಿಯಲ್ಲಿ ಒಂದೇ ದಿನ 61 ಕೊರೊನಾ ಕೇಸ್