Select Your Language

Notifications

webdunia
webdunia
webdunia
webdunia

ಐದು ಮಹಾನಗರ ಪಾಲಿಕೆಗಳ ಆಡಳಿತ ಜಿಲ್ಲಾಧಿಕಾರಿಗಳ ತೆಕ್ಕೆಗೆ

ಐದು ಮಹಾನಗರ ಪಾಲಿಕೆಗಳ ಆಡಳಿತ ಜಿಲ್ಲಾಧಿಕಾರಿಗಳ ತೆಕ್ಕೆಗೆ
ಬೆಳಗಾವಿ , ಗುರುವಾರ, 9 ಜನವರಿ 2020 (15:00 IST)
ರಾಜ್ಯದ ಐದು ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಮೇಯರ್ ಹಾಗೂ ಉಪಮೇಯರ್ ಅವರನ್ನು ಆಯ್ಕೆ ಮಾಡಬೇಕಿದೆ.

ಪ್ರಕ್ರಿಯೆ ಮುಗಿಯೋವರೆಗೆ ಆಯಾ ಜಿಲ್ಲಾಧಿಕಾರಿಗಳನ್ನು ಪಾಲಿಕೆಗೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬಳ್ಳಾರಿ, ಬೆಳಗಾವಿ, ವಿಜಯಪುರ, ದಾವಣಗೆರೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಆಯಾ ವ್ಯಾಪ್ತಿಯ ಪ್ರಾದೇಶಿಕ ಆಯುಕ್ತರನ್ನು ಆಡಳಿತಾಧಿಕಾರಿಯನ್ನು ನೇಮಕ ಮಾಡುತ್ತಿದ್ದ ಸರ್ಕಾರ, ಆದೇಶವನ್ನು ಬದಲಾವಣೆ ಮಾಡಿ ಇದೀಗ ಜಿಲ್ಲಾಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದೆ.  


Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನ ನಿಲ್ದಾಣದಲ್ಲಿ ಕೆಜಿ ಚಿನ್ನ ವಶ