Select Your Language

Notifications

webdunia
webdunia
webdunia
webdunia

ನಮ್ಮ ಮೆಟ್ರೋ ರೈಲಿನ ಪ್ರಯಾಣಿಕರಿಗೆ ಗುಡ್ ನ್ಯೂಸ್

ನಮ್ಮ ಮೆಟ್ರೋ ರೈಲಿನ ಪ್ರಯಾಣಿಕರಿಗೆ ಗುಡ್ ನ್ಯೂಸ್
bangalore , ಗುರುವಾರ, 23 ಜೂನ್ 2022 (19:53 IST)
ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಖುಷಿಯ ಸುದ್ದಿ. ನಿಮ್ಮ ಮೊಬೈಲ್ ಫೋನ್ನಲ್ಲೇ ಮೆಟ್ರೋ ರೈಲಿನ ರಿಯಲ್ ಟೈಮ್ ಸಂಚಾರದ ಮಾಹಿತಿ ಪಡೆಯಬಹುದಾಗಿದೆ. ಒಲಾ, ಊಬರ್, ಸ್ವಿಗ್ಗಿ, ಜೊಮಾಟೊ ಇತ್ಯಾದಿ ಅಪ್ಲಿಕೇಶನ್ಗಳಲ್ಲಿ ನೀವು ರಿಯಲ್ ಟೈಮ್ನಲ್ಲಿ ವಾಹನಗಳನ್ನು ಟ್ರ್ಯಾಕ್ ಮಾಡುವ ರೀತಿಯಲ್ಲೇ ಮೆಟ್ರೋ ರೈಲುಗಳ ಓಡಾಟವನ್ನು ಮೊಬೈಲ್ನಲ್ಲಿ ನೋಡಬಹುದಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಗೂಗಲ್ ಸಂಸ್ಥೆಯೊಂದಿಗೆ ಈ ಒಪ್ಪಂದಕ್ಕೆ ಸಹಿ ಹಾಕಿದೆ. "ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳ ಸಂಚಾರದ ಎಲ್ಲಾ ಮಾಹಿತಿಯನ್ನೂ ನಾವು ಗೂಗಲ್ಗೆ ಒದಗಿಸುತ್ತೇವೆ. ಇದನ್ನು ಬಳಸಿಕೊಂಡು ಗೂಗಲ್ ಮ್ಯಾಪ್ಸ್ನಲ್ಲಿ ರಿಯಲ್-ಟೈಮ್ ಮಾಹಿತಿಯನ್ನು ನೀಡಬಹುದು. ನಿರ್ದಿಷ್ಟ ಮೆಟ್ರೋ ನಿಲ್ದಾಣದಲ್ಲಿ ಯಾವ ಟ್ರೈನು ಯಾವ ಸಮಯಕ್ಕೆ ತಲುಪುತ್ತದೆ ಎಂಬುದನ್ನು ಜನರು ನೋಡಬಹುದು," ಎಂದು ಬಿಎಂಆರ್ಸಿಎಲ್ ನಿರ್ವಾಹಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

"ವೆಸ್ಟ್ ಆಫ್ ಕಾರ್ಡ್ ರಸ್ತೆ ಮೇಲುಸೇತುವೆ" ಕಾಮಗಾರಿ ಪರಿಶೀಲನೆ ಮಾಡಿದ ವಿ ಸೋಮಣ್ಣ