Select Your Language

Notifications

webdunia
webdunia
webdunia
webdunia

ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್ : ಸಂಭಾವನೆ ಹೆಚ್ಚಳಕ್ಕೆ ಚಿಂತನೆ

ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್ : ಸಂಭಾವನೆ ಹೆಚ್ಚಳಕ್ಕೆ ಚಿಂತನೆ
ಯಾದಗಿರಿ , ಸೋಮವಾರ, 16 ಆಗಸ್ಟ್ 2021 (13:43 IST)
ಯಾದಗಿರಿ (ಆ.16): ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಇಂಗ್ಲಿಷ್ ಹಾಗೂ ಗಣಿತ ವಿಷಯಗಳ ಅತಿಥಿ ಶಿಕ್ಷಕರ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

 ನಗರದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾದಗಿರಿ ಮತ್ತಿತರೆ ಜಿಲ್ಲೆಗಳಲ್ಲಿ ಈ ಬಗ್ಗೆ ಹೆಚ್ಚಿನ ಮಹತ್ವ ವಹಿಸಲಾಗುವುದು. ಅತಿಥಿ ಶಿಕ್ಷಕರ ಸಂಭಾವನೆ ಸೇರಿದಂತೆ ಒಂದಿಷ್ಟು ಬೇಡಿಕೆಗಳ ಬಗ್ಗೆಯೂ ಗಮನ ಹರಿಸಲಾಗುವುದು ಎಂದರು.
ಸಿಇಟಿ ಹಾಗೂ ಟಿಇಟಿ ಪರೀಕ್ಷೆಗಳಲ್ಲಿನ ಮಾನದಂಡಗಳಲ್ಲಿ ಏರಿಕೆಯಿದ್ದರಿಂದ ಈ ಭಾಗದಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ. ಬೇರೆ ಜಿಲ್ಲೆಯಿಂದ ನೇಮಕಾತಿಗೊಂಡವರು ಇಲ್ಲಿಗೆ ಬಂದು ವರ್ಗಾವಣೆಗೊಳ್ಳುವುದು ಶಿಕ್ಷಣ ಇಲಾಖೆಯಲ್ಲಷ್ಟೇ ಅಲ್ಲ, ಆರೋಗ್ಯ ಸೇರಿದಂತೆ ಕೆಲವೊಂದು ಇಲಾಖೆಗಳನ್ನೂ ಇದೆ. ಈಗ ಈ ಭಾಗದ ಕೊರತೆ ನೀಗಿಸಲು ಇಲ್ಲಿಗನುಗುಣವಾಗಿ ಶಿಕ್ಷಕರ ನೇಮಕಕ್ಕೆ ಸಿಇಟಿ, ಟಿಇಟಿ ನಡೆಸುವ ಇರಾದೆಯಿದೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಭಾರೀ ಏರಿಕೆ!