Select Your Language

Notifications

webdunia
webdunia
webdunia
webdunia

ಪಿಯುಸಿ ದಾಖಲಾತಿ ಆರಂಭ: ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ!

puc
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾಖಲೆ ಸಂಖ್ಯೆಯ 12 ಲಕ್ಷ ವಿದ್ಯಾರ್ಥಿಗಳಿ ಪಾಸಾಗಿದ್ದು, ಮರುದಿನವೇ ಅಂದರೆ ಇಂದಿನಿಂದಲೇ ಆಗಸ್ಟ್ 30ರವರೆಗೆ ದಂಡ ಶುಲ್ಕವಿಲ್ಲದ ದಾಖಲಾತಿ ಅವಕಾಶಕ್ಕೆ ಆದೇಶ ಹೊರಡಿಸಲಾಗಿದೆ.
ಆಗಸ್ಟ್ ಬಳಿಕ ಪ್ರಥಮ ಪಿಯುಸಿಗೆ ದಾಖಲಾತಿ ಪಡೆಯಬೇಕಾದರೆ ದಂಡ ಪಾವತಿಸಬೇಕಿದ್ದು, ಸೆಪ್ಟೆಂಬರ್ 1 ರಿಂದ 11 ರವರೆಗೆ ದಾಖಲಾತಿ ಮಾಡಿಕೊಳ್ಳುವವರು ವಿಳಂಬ ಶುಲ್ಕವಾಗಿ 670 ರೂ. ಪಾವತಿಸಬೇಕಾಗುತ್ತದೆ.
ಸೆಪ್ಟೆಂಬರ್ 11ರ ಬಳಿಕ ದಾಖಲಾತಿ ಇರುವುದಿಲ್ಲ. ಆದರೆ ವಿಶೇಷ ದಂಡ ರೂಪವಾಗಿ 2890 ರೂ . ಹೆಚ್ಚುವರಿ ಪಾವತಿಸಬೇಕಾಗುತ್ತದೆ. ವಿಶೇಷ ಶುಲ್ಕದಡಿ ಸೆಪ್ಟೆಂಬರ್ 13 ರಿಂದ 25 ರವರೆಗೆ ದಾಖಲಾತಿ ಪಡೆಯಬಹುದಾಗಿದೆ ಎಂದು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
21-22 ಮಾರ್ಗಸೂಚಿಯಲ್ಲಿ ತಿಳಿಸುವಂತೆ ದಾಖಲಾತಿ ಶುಲ್ಕ ಸಂಗ್ರಹ ಮಾಡಿಕೊಳ್ಳಲಾಗಿದ್ದು, ಪ್ರಥಮ ಪಿಯುಸಿ ಆನ್ ಲೈನ್ ತರಗತಿ  ಆಗಸ್ಟ್ 16ರಿಂದ ಆರಂಭಗೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ 86 ಡೆಲ್ಟಾ ಪ್ಲಸ್ ಪ್ರಕರಣ ಪತ್ತೆ: ಕೇಂದ್ರ ಸರಕಾರ