Select Your Language

Notifications

webdunia
webdunia
webdunia
webdunia

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್
bangalore , ಗುರುವಾರ, 23 ಫೆಬ್ರವರಿ 2023 (19:52 IST)
ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಶೇಕಡ 40ರಷ್ಟು ಫಿಟ್ ಮೆಂಟ್ ನೀಡಬೇಕು ಎಂದು ಒತ್ತಾಯಿಸಿ ಮಾರ್ಚ್ 1 ರಿಂದ ಮುಷ್ಕರ ನಡೆಸಲು ಮುಂದಾಗಿರುವುದಾಗಿ ಸರ್ಕಾರಿ ನೌಕರರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ 7ನೇ ವೇತನ ಆಯೋಗದಿಂದ ಮಧ್ಯಂತರ ವರದಿ ಪಡೆದು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
 
ಇಂದು ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ಏಳನೇ ವೇತನ ಬಗ್ಗೆ ಈಗಾಗಲೇ ನಿವೃತ್ತ ಚೀಫ್ ಕಮೀಷನರ್ ಸುಧಾಕರ್ ರಾವ್ ಕಮಿಟಿ ನೇಮಕ ಮಾಡಿದ್ದೇವೆ‌.ಸರ್ಕಾರಿ ನೌಕರರು ನನ್ನ ಬಳಿ ಬಂದಿದ್ರು.ಪೇ ಕಮೀಷನ್ ವರದಿ ಬಂದ ಬಳಿಕ ಮಾಡಲು ನಾವು ಬದ್ದರಾಗಿದ್ದೇವೆ.ಹೇಳ್ತೀವಿ.ಮಾರ್ಚ್ ತಿಂಗಳೊಳಗೆ ಮಧ್ಯಂತರ ವರದಿ ಕೊಡಲು  ಪೇ ಕಮೀಷನ್ಗೆ ಸೂಚನೆ ಕೊಟ್ಟಿದ್ದೇವೆ ಅದನ್ನೇ ಇಟ್ಟುಕೊಂಡು ವರದಿ ಅನುಷ್ಠಾನ ತರಲು ಸಿದ್ಧರಿದ್ದೇವೆ ಎಂದು ಸ್ಪಷ್ಟನೆ ನೀಡಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಸಾವಿರ ಹಣಕ್ಕೆ ವೃದ್ಧನ ಹೊಟ್ಟೆಗೆ ಚಾಕು ಇರಿತ