Publish Date: Sun, 01 May 2022 (18:15 IST)
Updated Date: Sun, 01 May 2022 (18:17 IST)
ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.ಮೇ 1 ರಿಂದ ಮೇ 15 ರ ಒಳಗೆ ಸಾರ್ವಜನಿಕ ವರ್ಗಾವಣೆ ಮುಗಿಸಬೇಕೆಂದು ಸರ್ಕಾರ ಕಟ್ಟು ನಿಟ್ಟಿನ ಆದೇಶ ನೀಡಿದೆ. ವರ್ಗಾವಣೆ ಕೈಗೊಳ್ಳಲು ಸಂಬಂಧ ಪಟ್ಟ ಸಚಿವರಿಗೆ ಅಧಿಕಾರ ನೀಡಿದೆ.ಆದರೆ ಸರ್ಕಾರ ಒಂದು ಕಂಡಿಷನ್ ಹಾಕಿದೆ.
ಎಲ್ಲಾ ಇಲಾಖೆಯ ಎ.ಬಿ.ಸಿ ಮತ್ತು ಡಿ ವರ್ಗದ ಅಧಿಕಾರಿಗಳು ಹಾಗೂ ನೌಕರರಿಗೆ ಅನ್ವಯವಾಗುವಂತೆ ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರಷ್ಟು ಮೀರಬಾರದುವ ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.ಈ ಮೊದಲು ಮೇ ಮತ್ತು ಜೂನ್ ತಿಂಗಳಲ್ಲಿ ಶೇ.4-5 ರಷ್ಟು ನೌಕರರ ವರ್ಗಾವಣೆಗೆ ಅವಕಾಶ ನೀಡಲಾಗಿತ್ತು. 2020-21ನೇ ಸಾಲಿನಿಂದ ಶೇ.6 ರಷ್ಟು ಮೀರದಂತೆ ವರ್ಗಾವಣೆಗೆ ಅವಕಾಶ ನೀಡಲಾಗಿದೆ.