ಗುಡ್ ನ್ಯೂಸ್: ಮೆಟ್ರೋ ಸಂಪರ್ಕ ಒದಗಿಸಲು ಬಿಎಂಟಿಸಿಯಿಂದ 643 ವಿದ್ಯುತ್ ಚಾಲಿತ ಬಸ್ ಗಳು

Webdunia
ಭಾನುವಾರ, 14 ನವೆಂಬರ್ 2021 (21:06 IST)
ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಸಂಪರ್ಕ ಕಲ್ಪಿಸಲು ಮುಂದಿನ 6 ತಿಂಗಳಲ್ಲಿ 643 ವಿದ್ಯುತ್ ಚಾಲಿತ ಬಸ್ ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿದೆ.
ಈ ಬಗ್ಗೆ ಮಾತನಾಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಅವರು, ಭಾರತ್ ಸ್ಟೇಜ್ 6ರ ಡೀಸೆಲ್ ವಾಹನಗಳು ತಾಂತ್ರಿಕ ಅಗತ್ಯತೆಗಳನ್ನು ಪೂರೈಸಿದ್ದು, ಮುಂದಿನ ದಿನಗಳಲ್ಲಿ 565 ಬಸ್ ಗಳನ್ನು ಬಿಎಂಟಿಸಿ ಪಡೆಯಲಿದೆ ಎಂದರು.
ಸದ್ಯ ಮೂರನೇ ಹಂತದ ಪರಿಶೀಲನೆ ನಡೆಯುತ್ತಿದ್ದು, ಇದರ ಅನುಮೋದನೆ ಬಳಿಕ ಮೂರು ತಿಂಗಳಲ್ಲಿ ಬಸ್ ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿದೆ. ಜತೆಗೆ ಜೆಬಿಎಂ ನಿಂದ 90 ಎಲೆಕ್ಟ್ರಿಕ್ ಬಸ್ ಗಳು ಹಾಗೂ ಅಶೋಕ್ ಲೇಲ್ಯಾಂಡ್ ನಿಂದ 300 ಬಸ್ ಗಳನ್ನು ಮುಂದಿನ 6 ತಿಂಗಳಲ್ಲಿ ಪಡೆಯಲಿದ್ದೇವೆ ಎಂದರು.
ಈ ಪೈಕಿ ಬಹುತೇಕ ಬಸ್ ಗಳನ್ನು ನಮ್ಮ ಮೆಟ್ರೋ ಸಂಪರ್ಕ ಹೊಂದಲು ಬಳಸಲಾಗುತ್ತದೆ ಎಂದರು.
ಬಿಎಂಟಿಸಿ ತನ್ನ ಹಳೆಯ ಬಸ್ ಗಳನ್ನು ಹರಾಜಿಗೆ ಹಾಕಿ ಹೊಸ ಬಸ್ ಗಳನ್ನು ಖರೀದಿ ಮಾಡುತ್ತಿದೆ. ಈಗ ನಗರದಲ್ಲಿ 5,141 ಬಸ್ ಗಳು ಪ್ರತಿದಿನ ಸಂಚರಿಸುತ್ತಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಯೋಧ್ಯೆ ಕೇಸರಿ ಧ್ವಜದಿಂದ ಮುಸ್ಲಿಮರಿಗೆ ಅನ್ಯಾಯ ಎಂದ ಪಾಕ್: ನಿಮ್ದು ಎಷ್ಟಿದೆಯೋ ನೋಡ್ಕೊಳ್ಳಿ ಎಂದ ಭಾರತ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭವಿಷ್ಯ ಇಂದು ತೀರ್ಮಾನಿಸಲಿದ್ದಾರೆ ಈ ನಾಲ್ವರು

ಅಧಿಕಾರ ಹಂಚಿಕೆ ಫೈಟ್ ನಡುವೆಯೇ ಬಿಜೆಪಿ, ಜೆಡಿಎಸ್ ಗೆ ಮಹತ್ವದ ಸಂದೇಶ ಕೊಟ್ಟ ಡಿಕೆ ಶಿವಕುಮಾರ್

ಒಪ್ಪಂದದ ಬಗ್ಗೆ ಸಂಚಲನ ಸೃಷ್ಟಿಸುತ್ತಿದೆ ಡಿಕೆ ಶಿವಕುಮಾರ್ ಇಂದಿನ ಟ್ವೀಟ್

ಪಹಲ್ಗಾಮ್ ದಾಳಿ ಆಂತರಿಕ ದಂಗೆ ಎಂದಿದ್ದ ಅಮೆರಿಕಾ: ಈಗ ವೈಟ್ ಹೌಸ್ ದಾಳಿಯನ್ನು ಉಗ್ರರದ್ದು ಎನ್ನುತ್ತಿದೆ

ಮುಂದಿನ ಸುದ್ದಿ
Show comments