Select Your Language

Notifications

webdunia
webdunia
webdunia
webdunia

ಗೋವಾ ಸಚಿವರ ಕನ್ನಡ ವಿರೋಧಿ ಹೇಳಿಕೆಗೆ ಗಡಿ ಉದ್ವಿಗ್ನ

ವಿನೋದ್ ಪಾಲೇಕರ್
ಬೆಳಗಾವಿ: ಕನ್ನಡಿಗರು ಹರಾಮಿಗಳು ಎಂದು ಗೋವಾ ನೀರಾವರಿ ಸಚಿವ ವಿನೋದ್ ಪಾಲೇಕರ್ ನೀಡಿರುವ ಅವಹೇಳನಕಾರಿ ಹೇಳಿಕೆ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದಾರೆ.
 

ಇದರಿಂದಾಗಿ ನಿನ್ನೆ ರಾತ್ರಿಯಿಂದಲೇ ಗೋವಾದಿಂದ ಗೋವಾ ಸಾರಿಗೆ ಬಸ್ ಗಳು ಕರ್ನಾಟಕ ಪ್ರವೇಶಿಸುತ್ತಿಲ್ಲ. ಆದರೆ ಕರ್ನಾಟಕ ಬಸ್ ಸಾರಿಗೆ ಬಸ್ ಗಳು ಎಂದಿನಂತೆ ಗೋವಾ ಕಡೆಗೆ ಸಂಚರಿಸುತ್ತಿವೆ.

ಇನ್ನು ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಇತ್ತ ರಾಜ್ಯದ ಬಿಜೆಪಿ ನಾಯಕರೂ ಗೋವಾ ಬಿಜೆಪಿ ಸರ್ಕಾರದ ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡಿಗರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಸ್ರೇಲ್ ಪ್ರಧಾನಿ ನೆತನ್ಯಾಹುವಿಗೆ ಆತ್ಮೀಯ ಸ್ವಾಗತ ಕೋರಿದ ಪ್ರಧಾನಿ ಮೋದಿ