Publish Date: Mon, 22 Nov 2021 (20:59 IST)
Updated Date: Mon, 22 Nov 2021 (21:03 IST)
ಪ್ರೈಮ್ ಏರಿಯಾದಲ್ಲಿ ನೀಡಬೇಕಿರೊ ಸೈಟ್ ಬೇರೆಯವರಿಗೆ ನೀಡಿ ಅದಕ್ಕೆ ಪ್ರತಿಯಾಗಿ ಬೇರೆಡೆ ಸೈಟ್ ನೀಡಲಾಗಿದೆ. ಅರ್ಹತೆ ಇಲ್ಲದವರಿಗೂ ಸೈಟ್ ನೀಡಲಾಗಿದ್ದು, ಭೂ ಸ್ವಾಧೀನ ಪಡೆಯುವಾಗಲೂ ಅಕ್ರಮ ಎಸಗಲಾಗಿದೆ. ಹೀಗಾಗಿ ಎಸಿಬಿ ಅಧಿಕಾರಿಗಳು ಈಗಿನದ್ದು ಮಾತ್ರವಲ್ಲದೆ ಹಳೆ ಫೈಲ್ಗಳನ್ನೂ ಕೆದಕುತ್ತಿದ್ದಾರೆ. 2020, 2019, 2018, 2017 ರ ವರೆಗಿನ ಫೈಲ್ ಗಳನ್ನು ಪರಿಶೀಲನೆ ಮಾಡಲಾಗಿದ್ದು, ಹಳೆ ಕೇಸ್ ಫೈಲ್ ತನಿಖೆ ನಂತರ ಈ ಹಿಂದೆ ಬಿಡಿಎ ನಲ್ಲಿ ಕೆಲಸ ಮಾಡಿದ್ದವರಿಗೂ ಸಮಸ್ಯೆ ಎದುರಾಗಿದೆ. ವರ್ಗಾವಣೆ ಅಗಿರೊ ಅಧಿಕಾರಿಗಳು ಅಕ್ರಮ ಎಸಗಿರುದು ಕಂಡು ಬಂದರೆ ಅವರ ಮೇಲೂ ಕೇಸ್ ದಾಖಲು ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ