Select Your Language

Notifications

webdunia
webdunia
webdunia
Monday, 7 April 2025
webdunia

ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರ ಪರದಾಟ

Give someone else a prime site
bangalore , ಸೋಮವಾರ, 22 ನವೆಂಬರ್ 2021 (20:35 IST)
ನಿನ್ನೆ ಸಂಜೆ 6ರಿಂದ ರಾತ್ರಿ 11 ಗಂಟೆವರೆಗೂ ಸುರಿದ ಭಾರಿ ಮಳೆಯಿಂದ ಯಲಹಂಕದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.
 
ಯಲಹಂಕ ನಗರದಲ್ಲಿ ನಿನ್ನೆ ಸಂಜೆ ಸತತ ನಾಲ್ಕೈದು ತಾಸು ಸುರಿದ ಮಳೆಗೆ ವಾಹನ ಸವಾರರಿಗೆ ಅಡಚಣೆ ಉಂಟಾಯಿತು. ಭಾರಿ ಮಳೆಯಿಂದ ಯಲಹಂಕ ರೈಲ್ವೆ ಅಂಡರ್ಪಾಸ್ (ಹೈಸ್ಕೂಲ್ ಕಾಂಪೌಂಡ್), ಯಲಹಂಕ ಉಪನಗರದ ಚಿಕ್ಕಬೊಮ್ಮಸಂದ್ರ, ಸುರಭಿಲೇಔಟ್, ಸಪ್ತಗಿರಿ ಲೇಔಟ್ ಸೇರಿದಂತೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
 
ವರುಣನ ಆರ್ಭಟಕ್ಕೆ ಏರ್​​ಪೋರ್ಟ್ ರಸ್ತೆ, ಕೋಗಿಲು ಕ್ರಾಸ್, ಪೊಲೀಸ್ ಠಾಣೆ ವೃತ್ತಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಬೈಕ್ ಸವಾರರು ಮತ್ತು ಪಾದಚಾರಿಗಳು ಪರದಾಡಿದರು

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ನಗರ ಜಿಲ್ಲೆಯ ಕಸಾಪ ಚುನಾವಣೆ ಫಲಿತಾಂಶ