ಗೃಹಲಕ್ಷ್ಮಿ ನೋಂದಣಿಗಾಗಿ ಇನ್ನು ಮೆಸೇಜ್ ಗೆ ಕಾಯಬೇಕಿಲ್ಲ ಎಂದು ಸಚಿವೆ ಹೆಬ್ಬಾಳ್ಕರ್ ಟ್ವೀಟ್ ಮಾಡಿದ್ದಾರೆ.ಅರ್ಹ ಫಲಾನುಭವಿಗಳು ನೇರವಾಗಿ ನೋಂದಣಿ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಕೆ ಮಾಡಬಹುದು.ಮೊದಲು ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ ಬಂದರಷ್ಟೇ ನೊಂದಣಿ ಮಾಡಿಸಿಕೊಳ್ಳಬೇಕಿತ್ತು.ಈಗ ಎಸ್ ಎಂ ಎಸ್ ಗೆ ಕಾಯಬೇಕಿಲ್ಲ.ಹತ್ತಿರದ ನೊಂದಣಿ ಕೇಂದ್ರಗಳಿಗೆ ತಲುಪಿ ಅರ್ಹ ಪಲಾನುಭವಿಗಳು ನೊಂದಾಯಿಸಿಕೊಳ್ಳಬಹುದು.ಬುಧವಾರ 11.39.716 ಮಹಿಳೆಯರಿಂದ ನೊಂದಣಿ ಮಾಡಿಕೊಂಡಿದ್ದಾರೆ.ಒಟ್ಟಾರೆ ಇದುವರೆಗೆ 62.01.530 ಮಹಿಳೆಯರಿಂದ ಅರ್ಜಿ ಸಲ್ಲಿಕೆಯಾಗಿದೆ.ನೊಂದಣಿ ಸಮಯದಲ್ಲಿ ಹಣ ಪಡೆದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಧಾಖಲೆಯಾಗಿದೆ.ಸೇವಾ ಕೇಂದ್ರಗಳಲ್ಲಿ ಅಸಡ್ಡೆ ತೋರಿದರು ಅವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ಸಚಿವೆ ಹೆಬ್ಬಾಳ್ಕರ್ ನೀಡಿದ್ದಾರೆ.ಅಲ್ಲದೇ ಗೃಹಲಕ್ಷ್ಮಿ ಯೋಜನೆ ನೊಂದಣಿ ಈಗ ಮತ್ತಷ್ಟು ಸರಳ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಟ್ವೀಟ್ ಮಾಡಿದ್ದಾರೆ.