Select Your Language

Notifications

webdunia
webdunia
webdunia
webdunia

ಸಮಸ್ಯೆಗಳ ಮಧ್ಯೆ ಇಂದು ಗೃಹಜ್ಯೋತಿ ಅರ್ಜಿಗೆ ಡೆಡ್ ಲೈನ್

Deadline for Grihajyoti application today amid problems
bangalore , ಗುರುವಾರ, 27 ಜುಲೈ 2023 (14:00 IST)
ಗೃಹಜ್ಯೋತಿ ಅರ್ಜಿಗೆ ಡೆಡ್ ಲೈನ್ ಇಂದು ನೀಡಲಾಗಿದೆ. ಈ ತಿಂಗಳ ಉಚಿತ ವಿದ್ಯುತ್ ಪಡೆಯಲು ಇಂದೆ ಕೊನೆ ದಿನವಾಗಿದೆ.ಪ್ರತಿ ತಿಂಗಳ 27 ನೇ ತಾರೀಕು ಅರ್ಜಿ ಸಲ್ಲಿಕೆ ಅಂತ್ಯವಾಗಿದೆ.ನಾಳೆಯಿಂದ ಅರ್ಜಿ ಹಾಕಿದ್ರೆ ಮುಂದಿನ ತಿಂಗಳು ಫ್ರೀ ಕರೆಂಟ್.ಇಂದು ಅರ್ಜಿ ಸಲ್ಲಿಸದಿದ್ರೆ ಕರೆಂಟ್ ಬಿಲ್ ಕಟ್ಟಬೇಕಾಗುತ್ತೆ.ಜನರನ್ನ ಸರ್ಕಾರದ ನೀತಿ ಕಂಗಲಾಗಿಸಿದೆ.ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ಸಮಸ್ಯೆಯಾಗಿದೆ.ಇದರ ಮಧ್ಯೆ ಇವತ್ತು ಈ ತಿಂಗಳ ಅರ್ಜಿ ಸಲ್ಲಿಕೆ ಅಂತ್ಯವಾಗಿದ್ದು.ಸಮಸ್ಯೆ ಇದ್ರೂ ಈ ತಿಂಗಳಿನ ಡೆಡ್ ಲೈನ್ ನಿಗಧಿಯಾಗಿದೆ.ಸದ್ಯ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಇಲ್ಲ .ಆದ್ರೆ ಈ ತಿಂಗಳು ಅರ್ಜಿ ಹಾಕಿದರೆ ಮಾತ್ರ ಈ ತಿಂಗಳಿನ ಕರೆಂಟ್ ಫ್ರೀ.ಸರ್ಕಾರದ ಗೊಂದಲದ ರೂಲ್ಸ್ ಗೆ ಜನ ಹೈರಾಣಾಗಿದ್ದಾರೆ.ಸರ್ವರ್ ಸಮಸ್ಯೆ ಸರಿಪಡಿಸದೇ ಹೀಗೇ ಮಾಡಿದ್ರೆ ಹೇಗೆ ಅಂತಾ ಜನರು ಕಿಡಿಕಾರುತ್ತಿದ್ದಾರೆ.ತೊಟ್ಟಿಲು ತೂಗಿ,ಮಗು ಚಿವಿಟಿದಂತಿದೆ ಸರ್ಕಾರದ ರೂಲ್ಸ್ ಅಂತಾ ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಮ್ ಪ್ರಿಯರೇ ಹುಷಾರ್ ! ಜಿಮ್ ಛಾವಣಿ ಕುಸಿತದಿಂದ 10 ಮಂದಿ ದುರ್ಮರಣ