Select Your Language

Notifications

webdunia
webdunia
webdunia
Sunday, 13 April 2025
webdunia

ಮೆಟ್ರೋ ಕಾಮಗಾರಿ ವೇಳೆ ಗ್ಯಾಸ್ ಪೈಪ್ ಲಿಕೇಜ್: ಸಾರ್ವಜನಿಕರಲ್ಲಿ ಆತಂಕ

ಗ್ಯಾಸ್ ಪೈಪ್
ಬೆಂಗಳೂರು , ಸೋಮವಾರ, 29 ಅಕ್ಟೋಬರ್ 2018 (16:43 IST)
ಮೆಟ್ರೋ ಕಾಮಗಾರಿ ವೇಳೆ ಡ್ರಿಲ್ಲಿಂಗ್ ಮಾಡುವಾಗ ಗ್ಯಾಸ್ ಪೈಪ್ ಲಿಕೇಜ್ ಆಗಿ ಕೆಲ ಗಂಟೆಗಳ‌ ಕಾಲ ರಸ್ತೆಯಲ್ಲಿ ಸಂಚರಿಸುವ ಜನರಲ್ಲಿ ಅಂತಕದ ವಾತಾವರಣ ನಿರ್ಮಾಣವಾಗಿತ್ತು.

ಬೆಂಗಳೂರಿನ ಮಹದೇವಪುರ ಬಳಿಯ ಗರುಡಾಚಾರ್ ಪಾಳ್ಯದಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ನಡೆಯುತ್ತಿದ್ದ ಮೆಟ್ರೋ ಕಾಮಗಾರಿ ವೇಳೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ   ಡ್ರಿಲ್ಲಿಂಗ್ ಮಾಡುವಾಗ ಅಲ್ಲಿದ್ದಂತಹ 70 ಕಿ ಲೋ ಪೋರ್ಸ್ ನ  ಗ್ಯಾಸ್ ಪೈಪ್ ಲೈನ್  ಲಿಕೇಜ್ ಆಗಿ ಕೆಲ ಗಂಟೆಗಳ ಕಾಲ ಅಲ್ಲಿನ ಸಾರ್ವಜನಿಕರಲ್ಲಿ ಅತಂಕ ವಾತಾವರಣ ನಿರ್ಮಾಣವಾಗಿತ್ತು.

ಇನ್ನು  ಐಟಿಪಿಎಲ್ ಪ್ರಮುಖ ರಸ್ತೆಯು ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು. ಅವಘಡದ ಅತಂಕದಲ್ಲಿ ಅಲ್ಲಿನ ಸುತ್ತಮುತ್ತಲಿನ ಕಡೆ ಮೊಬೈಲ್ ಪೋನ್ ಸಹ ನಿಷೇಧಿಸಲಾಗಿತ್ತು.

ಸಮಸ್ಯೆ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಗ್ಯಾಸ್ ಲೀಕೆಜ್ ನಿಲ್ಲಿಸಲು ಹರಸಾಹಸ ಪಡಬೇಕಾಯಿತ್ತು.ನಂತರ ಕೆಲ ಗಂಟೆಗಳ ಬಳಿಕ ಗ್ಯಾಸ್ ಪೈಪ್ ಲಿಕೇಜ್ನನ್ನು ನಿಲ್ಲಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೇಡಿಕೆ ಈಡೇರದೆ ಬೇಸತ್ತ ಗ್ರಾಮಸ್ಥರಿಂದ ಬೈ ಎಲೆಕ್ಷನ್ ಮತದಾನ ಬಹಿಷ್ಕಾರದ ಬೆದರಿಕೆ!