Publish Date: Sun, 15 Jul 2018 (16:29 IST)
Updated Date: Sun, 15 Jul 2018 (16:33 IST)
ಮನೆಯ ಬಳಿ ಬಾರಿ ಗಾತ್ರದ ಹಾವನ್ನು ಕಂಡು ಒಂದು ಕ್ಷಣ ಮನೆಯಲ್ಲಿದ್ದ ಜನರು ಗಾಬರಿಗೊಂಡ ಘಟನೆ ನಡೆದಿದೆ. ಆನೇಕಲ್ ಮತ್ತು ಚಂದಾಪುರ ಮುಖ್ಯ ರಸ್ತೆಯ ಕಾವಲಹೊಸಹಳ್ಳಿ ದಿಣ್ಣೆಯಲ್ಲಿರುವಂತಹ ಚಂದ್ರಪ್ಪ ಎಂಬುವವರ ಮನೆಯ ಬಳಿ ಘಟನೆ ನಡೆದಿದೆ.
ಸುಮಾರು 7 ಅಡಿ ಉದ್ದದ ಕೆರಿಹಾವು ಪ್ರತ್ಯಕ್ಷವಾಗಿ ಮನೆಯಲ್ಲಿದ್ದವರನ್ನು ಒಂದು ಕ್ಷಣ ಗಾಬರಿ ಪಡುವಂತೆ ಮಾಡಿದೆ. ನಂತರ ಅಕ್ಕ ಪಕ್ಕದ ಸ್ಥಳೀಯರೆಲ್ಲ ಸೇರಿಕೊಂಡಾಗ ಹಾವು ಪಕ್ಕದಲ್ಲೇ ಇದ್ದ ಮಾವಿನ ಮರವನ್ನು ಏರಿದೆ.
ನಂತರ ಹಾವು ಹಿಡಿಯುವವರನ್ನು ಕರೆಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿನಲ್ಲಿ ಬಿಡಲಾಯಿತು. ಕೊನೆಗೆ ಜನರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಯಿತು.