Select Your Language

Notifications

webdunia
webdunia
webdunia
webdunia

ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ: ಯಡಿಯೂರಪ್ಪ, ಕುಮಾರಸ್ವಾಮಿ ವಿಚಾರಣೆಗೆ ಹಾಜರು

Gangenahalli Denotification Case, Union Minister HD Kumaraswamy, Former CM BS Yeddyurappa

Sampriya

ಬೆಂಗಳೂರು , ಶುಕ್ರವಾರ, 27 ಸೆಪ್ಟಂಬರ್ 2024 (17:49 IST)
Photo Courtesy X
ಬೆಂಗಳೂರು: ಬೆಂಗಳೂರಿನ ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವರು ಒಂದು ಲೋಕಾಯುಕ್ತು ಪೊಲೀಸರ ವಿಚಾರಣೆಗೆ ಹಾಜರಾದರು.

ಪ್ರಕರಣ ಸಂಬಂಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸತತ ಮೂರು ಗಂಟೆಗಳ ಕಾಲ ವಿಚಾರಣೆ ಒಳಪಟ್ಟ ಬೆನ್ನಲ್ಲೇ ಕುಮಾರಸ್ವಾಮಿ ಅವರು ವಿಚಾರಣೆಗೆ ಹಾಜರಾದರು. ಒಂದೇ ಪ್ರಕರಣದ ಎಫ್‌ಐಆರ್‌ನಲ್ಲಿ ಇಬ್ಬರು ಮಾಜಿ ಸಿಎಂಗಳು ಇದೀಗ ವಿಚಾರಣೆ ಎದುರಿಸಿದ್ದಾರೆ.  

ವಿಚಾರಣೆಯಲ್ಲಿ ಈ ಪ್ರಕರಣದಲ್ಲಿ ತಮ್ಮ ಪಾತ್ರದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.ಬ ಡಿನೋಟಿಫಿಕೇಸನ್ ಪ್ರಕರದಲ್ಲಿ ನೋಟಿಸ್ ಜಾರಿಯಾದ ಹಿನ್ನೆಲೆ ಕುಮಾರಸ್ವಾಮಿ ಅವರು ವಿಚಾರಣೆಗೆ ಒಳಪಟ್ಟರು.

ಈ ಬಗ್ಗೆ ನಿನ್ನೆ ದೆಹಲಿ ಮಾತನಾಡಿದ ಎಚ್​ಡಿ ಕುಮಾರಸ್ವಾಮಿ, ಲೋಕಾಯುಕ್ತದ ಯಾವ ಪೊಲೀಸ್ ಅಧಿಕಾರಿಯೂ ನನ್ನನ್ನು ಭೇಟಿ ಮಾಡಿಲ್ಲ. ಅವರು ನನಗೆ ನೋಟಿಸ್ ನೀಡಿದ್ದಾರೆ ಎಂಬುವುದನ್ನು ಕೂಡ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಆದರೆ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ದಿಢೀರನೇ ಎಚ್‌ಡಿಕೆ ವಿಚಾರಣೆಗೆ ಹಾಜರಾಗಿದ್ದಾರೆ.

ಡಿನೋಟಿಫಿಕೆಷನ್ ಪ್ರಕರಣದಲ್ಲಿ ನಾನೇನೂ ತಪ್ಪು ಮಾಡಿಲ್ಲ. ಕಾನೂನಿನ ಪ್ರಕಾರವೇ ಕ್ರಮಕೈಗೊಳ್ಳಾಗಿದೆ. ಮುಡಾ ಹಗರಣದಿಂದ ಗಮನ ಬೇರೆಡೆ ಸೆಳೆಯಲು ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ಹಳೆ ಪ್ರಕರಣಗಳನ್ನು ಕೆದಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

Hurun India Under List: ಸ್ನಾನ ಗಿಟ್ಟಿಸಿಕೊಂಡು ಅಂಬಾನಿ ದಂಪತಿಯ ಇಬ್ಬರು ಮಕ್ಕಳು