Select Your Language

Notifications

webdunia
webdunia
webdunia
webdunia

ಇಡಿ ದಾಳಿ ನಡೆಯುತ್ತಿರುವಾಗಲೇ ಸಿಎಂ ಅನ್ನು ಭೇಟಿಯಾದ ಜಿ ಪರಮೇಶ್ವರ್‌

ಮುಖ್ಯಮಂತ್ರಿ ಸಿದ್ದರಾಮಯ್ಯ

Sampriya

ಬೆಂಗಳೂರು , ಗುರುವಾರ, 22 ಮೇ 2025 (16:42 IST)
Photo Credit X
ಬೆಂಗಳೂರು: ತಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಯುತ್ತಿರುವ ನಡುವೆಯೇ ಗೃಹ ಸಚಿವ ಜಿ ಪರಮೇಶ್ವರ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಭಾರೀ ಕುತೂಹಲ ಮೂಡಿಸಿದೆ.

ಭೇಟಿಯ ಹಿಂದಿನ ನಿಖರವಾದ ವಿವರಗಳು ಇನ್ನೂ ಹೊರಬಂದಿಲ್ಲ. ಆದರೆ, ಕಾಂಗ್ರೆಸ್ ಮೂಲಗಳು ಹೇಳುವಂತೆ ಪರಮೇಶ್ವರ ಅವರು ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಗೆ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಚಿನ್ನದ ಕಳ್ಳಸಾಗಣೆ ದಂಧೆ ಸೇರಿದಂತೆ ಅಕ್ರಮ ಹಣಕಾಸು ವಹಿವಾಟು ಬಗ್ಗೆ ಇಡಿ ತನಿಖೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಚಿನ್ನ ಕಳ್ಳ ಸಾಗಣೆ ಆರೋಪಿ, ನಟಿ ರನ್ಯಾರಾವ್ ಖಾತೆಗೆ ಹವಾಲಾ ಹಣ ವರ್ಗಾವಣೆ ಮಾಡಿದವರನ್ನು ಗುರಿಯಾಗಿಸಿಕೊಂಡು ED ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ರಾಜ್ಯದ 16 ಸ್ಥಳಗಳಲ್ಲಿ ದಾಳಿ ನಡೆಸಿದೆ. ಇದರಲ್ಲಿ ಪರಮೇಶ್ವರ ಅವರಿಗೆ ಸಂಬಂಧಿಸಿದ ಮೂರು ಶಿಕ್ಷಣ ಸಂಸ್ಥೆಗಳೂ ಸೇರಿವೆ.

ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸಿದ್ಧಾರ್ಥ ವೈದ್ಯಕೀಯ ಕಾಲೇಜು ಸೇರಿದಂತೆ ಮೂರು ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಕ್ಕೆ ED ಅಧಿಕಾರಿಗಳು ಭೇಟಿ ನೀಡಿ ಕಳೆದ ಐದು ವರ್ಷಗಳ ಆರ್ಥಿಕ ದಾಖಲೆಗಳನ್ನು ಕೋರಿದ್ದಾರೆ ಎಂದು ಪರಮೇಶ್ವರ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

PM Modi: ಪಾಕಿಸ್ತಾನಕ್ಕೆ ಸಿಂಧೂ ನದಿಯ ಹನಿ ನೀರೂ ಸಿಗಲ್ಲ: ಖಡಕ್ ಸಂದೇಶ ಕೊಟ್ಟ ಪ್ರಧಾನಿ ಮೋದಿ