Select Your Language

Notifications

webdunia
webdunia
webdunia
webdunia

ED Raid: ಗೃಹಸಚಿವ ಡಾ ಜಿ ಪರಮೇಶ್ವರ್ ಬುಡಕ್ಕೇ ಬಂತು ಇಡಿ: ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ದಾಳಿ

ED raid on Parameshwar

Krishnaveni K

ತುಮಕೂರು , ಬುಧವಾರ, 21 ಮೇ 2025 (11:57 IST)
ತುಮಕೂರು: ಗೃಹಸಚಿವ ಡಾ ಜಿ ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆದಿದ್ದು, ಸ್ವತಃ ಸಚಿವರಿಗೇ ಸಂಕಷ್ಟ ಬಂದೊರಗಿದೆ.

ಇಂದು ಬೆಳಿಗ್ಗೆಯೇ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ತುಮಕೂರಿನ ಹೆಗ್ಗೆರೆ ಬಳಿಯಿರುವ ಮೆಡಿಕಲ್ ಕಾಲೇಜು, ಎಸ್ಎಸ್ಐಟಿ ಕಾಲೇಜಿನ ಮೇಲೆ ಇಡಿ ದಾಳಿ ನಡೆದಿದೆ.

ಅಲ್ಲದೆ ನೆಲಮಂಗಲದ ಟಿ ಬೇಗೂರಿನಲ್ಲಿರುವ ಕಾಲೇಜಿನ ಮೇಲೂ ದಾಳಿ ನಡೆದಿದೆ. ಈಗಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಪಾಸಣೆ ಮುಂದುವರಿಸಿದ್ದಾರೆ. ಈ ಹಿನ್ನಲೆಯಲ್ಲಿ ಡಿವೈಎಸ್ ಪಿ ನೇತೃತ್ವದಲ್ಲಿ ಕಾಲೇಜಿಗೆ ಭದ್ರತೆ ನೀಡಲಾಗಿದೆ.

ಕಾಲೇಜಿನ ಒಳಗೆ ಯಾರೂ ಬಾರದಂತೆ ಇಡಿ ಅಧಿಕಾರಿಗಳು ನಿರ್ಬಂಧ ವಿಧಿಸಿದ್ದಾರೆ. ಇದರೊಂದಿಗೆ ಇಡಿ ಅಧಿಕಾರಿಗಳು ಗೃಹಸಚಿವ ಪರಮೇಶ್ವರ್ ಗೆ ಬೆಳಿಗ್ಗೆಯೇ ಬಿಗ್ ಶಾಕ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Arecanut price today: ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ನಿರಾಸೆ