Publish Date: Tue, 12 Apr 2022 (19:12 IST)
Updated Date: Tue, 12 Apr 2022 (19:15 IST)
ರಾಹುಲ್ ಗಾಂಧಿ ಮತ್ತೆ AICC ಅಧ್ಯಕ್ಷರಾಗಬೇಕು ಎಂದು ಛತ್ತೀಸ್ಘಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಒತ್ತಾಯ ಮಾಡಿದ್ದಾರೆ. ಪಂಚರಾಜ್ಯಗಳ ಚುನಾವಣೆ ಬಳಿಕ ಕಾಂಗ್ರೆಸ್ನಲ್ಲಿ ಕಳವಳ ಹಿನ್ನಲೆ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆಗೆ G-23 ಗುಂಪು ಆಗ್ರಹಿಸಿತ್ತು. G-23 ನಾಯಕರ ಬೇಡಿಕೆ ಬಳಿಕ ಬಘಲ್ ಈ ಡಿಮ್ಯಾಂಡ್ ಇಟ್ಟಿದ್ದಾರೆ. ಚುನಾವಣೆಗಳು ಬರುತ್ತವೆ ಹೋಗುತ್ತವೆ ಇದರಿಂದ ನಿರಾಶೆಗೊಳ್ಳಬಾರದು ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಸಲಹೆ ಕೊಟ್ಟಿದ್ದಾರೆ ಬಘೇಲ್. ಪಕ್ಷದ ಸಾಂಸ್ಥಿಕ ಚುನಾವಣೆಗೆ ದಿನಾಂಕ ನಿಗದಿಯಾಗಿದೆ ಆಗಸ್ಟ್ನಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯಾರು ಬೇಕಾದರೂ ಸ್ಪರ್ಧಿಸಬಹುದು, ನಮ್ಮ ಪಕ್ಷದಲ್ಲಿ ಚುನಾವಣೆ ಪ್ರಜಾಸತ್ತಾತ್ಮಕವಾಗಿ ನಡೆಯುತ್ತೆ ಎಂದಿದ್ದಾರೆ.