Select Your Language

Notifications

webdunia
webdunia
webdunia
webdunia

ಹಲಸೂರಿನಿಂದ - ಬೈಯಪ್ಪನಹಳ್ಳಿವರೆಗೂ ರಸ್ತೆ ಅಧ್ವಾನ- ರಸ್ತೆಯಲ್ಲಿ ಗುಂಡಿಗಳಾದೇ ಕಾರುಬಾರು

From Halasuri - to Baiyappanahalli road adhwana
bangalore , ಮಂಗಳವಾರ, 7 ಫೆಬ್ರವರಿ 2023 (19:56 IST)
ರಾಜಧಾನಿಯ ಕೆಲವೊಂದು ರಸ್ತೆಗಳ ಕಾಮಗಾರಿ ಮಾಡ್ತಿರುವ ಬಿಬಿಎಂಪಿ ಗೆ ಸುಮಾರು ವರ್ಷಗಳಿಂದ ಇಲ್ಲೊಂದು ರಸ್ತೆ ಗುಂಡಿಗಳಿಂದ ಆವೃತ್ತವಾಗಿವುದು ಕಣ್ಣಿಗೆ ಕಾಣ್ತಿಲ್ಲ ಅನ್ನುವಾಗೆ ಕಾಣುತ್ತೆ.ಅಂದಹಾಗೆ  ಹಲಸೂರಿನಿಂದ ಬೈಯಪ್ಪನಹಳ್ಳಿವರೆಗೂ ಮುಖ್ಯರಸ್ತೆ ಗುಂಡಿಗಳಿಂದ ,ಧೂಳಿನಿಂದ ಆಧ್ವಾನವಾಗಿದ್ದು .ಈ ರಸ್ತೆಯ ಕಡೆ ಯಾರು ಗಮನಹಾರಿಸ್ತಿಲ್ಲ ಅಂತಾ  ಜನರು ಆಕ್ರೋಶ ಹೊರಹಾಕ್ತಿದ್ದಾರೆ.
 
ಹೌದು, ನಿತ್ಯ ಈ ಒಂದು ರಸ್ತೆಯ ಮುಖಾಂತರ ಮಾರ್ಕೆಟ್ ,ಮೆಜೆಸ್ಟಿಕ್, ಹೊಸಕೋಟೆ, ಮಾಲೂರು, ಕೋಲಾರ ಸೇರಿದಂತೆ ಹಲವು ಕಡೆ ವಾಹನಗಳು ಸಂಚಾರಿಸುತ್ತೆ. ಸಾವಿರಾರು ವಾಹನಗಳು ಸಂಚಾರಿಸುವ ಈ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ವಾಹನಸವಾರರು ಜೀವ ಭಯದಲ್ಲಿ ವಾಹನ ಚಾಲಿಸುತ್ತಾರೆ.
 
ಇನ್ನು ಎಷ್ಟೋ ಬಾರಿ ಈ ರಸ್ತೆ ಅಪಘಾತವಾಗಿದೆ. ರಸ್ತೆಯಲ್ಲಿ ನೋಡಿಕೊಂಡು ವಾಹನ ಓಡಿಸಬೇಕು.ಸ್ವಲ್ಪ ಯಮಾರಿದ್ರೆ ಸಿದ್ದ ಯಮಾಲೋಕಕ್ಕೆ ಹೋಗಬೇಕಾಗುತ್ತೆ.ಇನ್ನು ಎಷ್ಟೋ ಜನರು ರಸ್ತೆ ಗುಂಡಿಗಳಿಗೆ ಬಿದ್ದು ಸಾವನಾಪ್ಪುತ್ತಿದ್ರು.ಬಿಬಿಎಂಪಿ ಮಾತ್ರ ಬುದ್ದಿ ಕಲಿತ್ತಿಲ್ಲ. ಸಾವಿರಾರು ವಾಹನಗಳು ಓಡಾಡುವ ಹಲಸೂರಿನ ಮುಖ್ಯ ರಸ್ತೆಯಿಂದ ಬೈಯಪ್ಪನಹಳ್ಳಿವರೆಗೂ ಗುಂಡಿಗಳಿದ್ರು ಬಿಬಿಎಂಪಿ ಮಾತ್ರ ಡೋಟ್ ಕೇರ್ ಅಂತಿದೆ. ಇನ್ನು ಜನ ಎಷ್ಟು ಬಾಯಿ ಬಾಯಿಬೋಡೆದುಕೊಂಡ್ರು ಅಧಿಕಾರಿಗಳು ಗಮನಹಾರುಸದೇ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಗಸೆಂಟರ್ ಗಾಗಿ ಮರಗಳ‌ ಮಾರಣಹೋಮ..!