Select Your Language

Notifications

webdunia
webdunia
webdunia
webdunia

ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡೊಲ್ಲಾ ಹೆಚ್ ಡಿಕೆ ಸ್ಪಷ್ಟನೆ

ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡೊಲ್ಲಾ ಹೆಚ್ ಡಿಕೆ ಸ್ಪಷ್ಟನೆ
bangalore , ಮಂಗಳವಾರ, 7 ಫೆಬ್ರವರಿ 2023 (18:20 IST)
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದವರನ್ನ ಸಿಎಂ ಆಗ್ತಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕಾವು ಪಡೆಯುತ್ತಿರುವಾಗಲೇ, ಅದಕ್ಕೆ ಸ್ಪಷ್ಟನೆ ನೀಡೋದಕ್ಕೆ ಹೆಚ್ ಡಿಕೆ ಮುಂದಾಗಿದ್ದಾರೆ. ಈ ವಿಚಾರದ ಬಗ್ಗೆ ಜೆಡಿಎಸ್ ಕಚೇರಿಯಲ್ಲಿ ಬಿಜೆಪಿ ನಾಯಕರ ಟೀಕೆಗಳ ಬಗ್ಗೆ ತಿರುಗೇಟು ನೀಡಿದ್ರು.. ಇದರ ಜೊತೆಗೆ ಬಿಜೆಪಿ ಕೇಂದ್ರ ಸಚಿವರ ವಿರುದ್ದ ಮತ್ತೊಂದು ಹಣ ವರ್ಗಾವಣೆ ದಾಖಲೆ ಬಿಡುಗಡೆ ಮಾಡಿದ್ದಾರೆ .ರಾಜ್ಯ ಸರ್ಕಾರದ ವಿರುದ್ದ ಮತ್ತೆ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬ್ರಾಹ್ಮಣ ಸಮುದಾಯದವರು ಸಿಎಂ ಆಗ್ತಾರೆ ಎಂಬ ಹೇಳಿಕೆಯನ್ನ ಅವರಿಗೆ ಬಂದಂತೆ ಹೇಳಿಕೊಳ್ತಿದ್ದಾರೆ. ನಾನು ಕೊಟ್ಟಂತಹ ಪ್ರತಿಕ್ರಿಯೆಗೆ  ಬಿಜೆಪಿ ನಾಯಕರು ಬೇರೆಯ ಅರ್ಥ ಕೊಡ್ತಿದ್ದಾರೆ. ನಾನು ಕೊಟ್ಟಂತಹ ರಾಜ್ಯಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗ್ತಿದೆ. ನಾನಾಗಲಿ ನಮ್ಮ ಕುಟುಂಬದವರಾಗಲಿ ಯಾವತ್ತು ಜಾತಿ ಹೆಸರಿನಿಂದ ರಾಜಕೀಯ ಮಾಡಿಲ್ಲಾ. ನಾವು ಯಾವುದೇ ರೀತಿಯಲ್ಲೂ ಯಾವುದೇ ಸಮುದಾಯಕ್ಕೆ ಅಪಮಾನ ಮಾಡಿಲ್ಲಾ ಅಂತ ಸ್ಪಷ್ಟನೆ ನೀಡಿದ್ರು.

ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಮತ್ತೆ  ಬಿಎಮ್ ಎಸ್ ಹಗರಣದ ಆರೋಪವನ್ನ ಮತ್ತೆ ಕೆದಕ್ಕಿರೋದು ಮತ್ತೆ ಈ ವಿಚಾರ ಕಾವು ಪಡೆಯುತ್ತಾ ಎನ್ನೋ ಕುತುಹಲ ಹೆಚ್ಚಾಗಿದೆ. ಬಿಎಂಎಸ್ ಟ್ರಸ್ಟ್ ಮುಖ್ಯಸ್ಥರ ಜೊತೆ ಸಚಿವ ಅಶ್ವಥ್ ನಾರಾಯಣ್ ಊಟ ಮಾಡುತ್ತಿರುವ ಫೋಟೋ ಬಿಡುಗಡೆ ಮಾಡಿದ ಹೆಚ್ ಡಿಕೆ, ಪಾಪಾ ಅಶ್ವಥ್ ನಾರಾಯಣ್ ನನ್ನ ಮೇಲೆ ಆರೋಪ ಮಾಡಿದ್ದೇ ಮಾಡಿದ್ದು.ಬಿಎಂಎಸ್ ಟ್ರಸ್ಟ್ ನಲ್ಲಿ ಯಾರು ತಿಂದಿದ್ದು ನೀವೇ ಹೇಳಿ.ಈ ಬಗ್ಗೆ ನಾನು ಸದನದಲ್ಲಿ ಇದನ್ನು ಸುಮ್ಮನೇ ಪ್ರಸ್ತಾಪ ಮಾಡಿದ್ದಲ್ಲ,ನಾನು ಇದನ್ನು ಸುಮ್ಮನೆ ಬಿಡಲ್ಲ. ನಮ್ಮ ಸರ್ಕಾರ ಬರಲಿ ಅಂತಾ ಕಾಯುತ್ತಿದ್ದೇನೆ ಅಂತ ಎಚ್ಚರಿಕೆ ನೀಡಿದ್ರು.
ಇಷ್ಟಲ್ಲದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ದ ಮತ್ತೊಂದು ಆರೋಪದ ದಾಖಲೆ ಬಿಡುಗಡೆ ಮಾಡಿದ್ರು ಎಮ್ ಎಲ್ ಸಿ ಬೋಜೆಗೌಡ್ರು .ಪ್ರಹ್ಲಾದ್ ಜೋಷಿಯವರು ನಮ್ಮ ಬಗ್ಗೆ ಮಾತಾಡಿದ್ದಾರೆ,ಅವರ ಕಚೇರಿಯಲ್ಲಿ ಏನು ನಡೆಯುತ್ತಿದೆ ಅಂತ ಹೇಳಬೇಕಿದೆ.ಕೇಂದ್ರ ಸಚಿವ ಹರ್ಷವರ್ಧನ್  ಆಫೀಸ್ ನಿಂದ ಪ್ರಹ್ಲಾದ್ ಜೋಷಿ ಆಫೀಸ್ ಗೆ ಎರಡು ವಿಚಾರಗಳಿಗೆ ಸಂಬಂಧಪಟ್ಟಂತೆ ಪತ್ರ ಹೋಗಿದೆ. ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ನಲ್ಲಿ ಮೆಂಬರ್ ಹಾಗೂ ಏಮ್ಸ್ ಡೈರಕ್ಡರ್ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ. ಇದಕ್ಕೆ ಹಣ ವರ್ಗಾವಣೆ ಆಗಿದೆ ಎಂಬ ಹೊಸ ಬಾಂಬ್ ಹಾಕಿದ್ರು ಎಮ್ ಎಲ್ ಸಿ ಬೋಜೆಗೌಡ್ರು. ಇದ್ರಲ್ಲಿ ಯಾರಿಂದ ಯಾರಿಗೆ ಹಣ ಹೋಗಿದೆ ಅಂತ ಚೆಕ್ ಮಾಡಿಕೊಳ್ಳಿ. ಎರಡೂವರೆ ಕೋಟಿ ಹಣ ಸಂದಾಯ ಆಗಿದೆ, ಯಾರಿಗೋಸ್ಕರ ಹಣ ತೆಗೆದುಕೊಂಡಿದ್ದೀರ ಅಂತಾ ಇದಕ್ಕೆ ಪ್ರಹ್ಲಾದ್ ಜೋಶಿ ಉತ್ತರ ಕೊಡಬೇಕಿದೆ. ಇನ್ನೂ ಸ್ವಲ್ಪ ದಿನದಲ್ಲೇ ದಾಖಲೆ ಬಿಡುಗಡೆ ಮಾಡ್ತೀವಿ ಅಂತ ಬೋಜೆಗೌಡ್ರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಆರೋಪ ಮಾಡಿದ್ರು

ಒಟ್ನಲ್ಲಿ ಬ್ರಾಹ್ಮಣ ಸಮುದಾಯದವರು ಸಿಎಂ ಆಗ್ತಾರೆ ಅನ್ನೋ ಕಾವು ಹೆಚ್ಚಾಗುತ್ತಿರುವಾಗಲೇ ಜೆಡಿಎಸ್ ನಾಯಕರು ಸ್ಪಷ್ಟನೆ ನೀಡೋದ್ರ ಜೊತೆಗೆ ಮತ್ತೆ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸಚಿವರ ವಿರುದ್ದ ಆರೋಪಗಳನ್ನ ಬಿಡುಗಡೆ ಮಾಡಿರೋದು ಕುತೂಹಲ ಮೂಡಿಸಿದೆ. ಒಂದು ಕಡೆ ಹೆಚ್ ಡಿಕೆ ಬಿಎಮ್ ಎಸ್ ಟ್ರಸ್ಟ್ ಆರೋಪವನ್ನ ವಿಚಾರವನ್ನ ಎತ್ತಿದ್ದಾರೆ. ಇನ್ನೂ ಎಮ್ ಎಲ್ ಸಿ‌ ಬೋಜೆಗೌಡ್ರು ಕೇಂದ್ರ ಸಚಿವರ ವಿರುದ್ದ ಮಾಡಿರುವ ಆರೋಪಕ್ಕೆ ಬಿಜೆಪಿ ನಾಯಕರು ಯಾವ ರೀತಿ ಉತ್ತರ ಕೊಡ್ತಾರೆ, ಇನ್ನೂ ದಾಖಲೆಗಳನ್ನ ಬಿಡುಗಡೆ ಮಾಡ್ತಿವಿ ಅನ್ನೋ ಜೆಡಿಎಸ್ ನಾಯಕರ ಹೇಳಿಕೆ ಯಾವ ರೀತಿ ತಿರುವು ಪಡೆಯುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ