ಕುಂಟ ಕುಂಟ ಎಂದು ರೇಗಿಸಿದ್ದಕ್ಕೆ ಬರ್ಬರ ಹತ್ಯೆಗೈದ ಸ್ನೇಹಿತರು..!

Webdunia
ಗುರುವಾರ, 22 ಜೂನ್ 2023 (18:18 IST)
ರಸ್ತೆಯಲೆಲ್ಲಾ ರಕ್ತದ ಕಲೆ, ಆತಂಕದಿಂದ ಇರೋ ಸ್ಥಳೀಯರು, ಪೊಲೀಸರು ಬರೋದನ್ನ ನೋಡಿದ ಜನ, ಏನಾಯ್ತಪ್ಪ ಎಂದು ಗಾಬರಿಯಿಂದ ನೋಡ್ತಾಯಿರೋ ಜನರು, ಇದೆಲ್ಲಾ ನಡೆದಿದ್ದು ಬೇರೆಯಲ್ಲೂ ಅಲ್ಲ ನಗರದ ಅನ್ನಪೂರ್ಣೇಶ್ವರಿ ನಗರದಲ್ಲಿ ಆಗಿರೋ ಘಟನೆ,  ಕ್ಷಲ್ಲಕ ಕಾರಣಕ್ಕಾಗಿ ಸ್ನೇಹಿತರೇ ಸೇರಿ ಕುಡಿದ ಅಮಲಿನಲ್ಲಿ ಮತ್ತೊಬ್ಬ ಸ್ನೇಹಿತನ್ನ ಬರ್ಬರವಾಗಿ ಕೊಲೆ‌ಮಾಡಿದ್ದಾರೆ.ಕುಂಟ ಕುಂಟ ಅಂತಾ ರೇಗಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನ ಹಾಲೋ ಬ್ಲಾಕ್ ಅನ್ನು ತಲೆಗೆ ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರೋ ಘಟನೆ ನಗರದ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ನಿನ್ನೆ ರಾತ್ರಿ ಕುಡಿಯೋಕೆ ಜೊತೆಯಲ್ಲೇ ಹೋಗಿದ್ದ ಗಿರೀಶ್ ಮತ್ತು ಲೋಕೆಶ್ ಎಂಬ ಇಬ್ಬರು ಆರೋಪಿಗಳು ತನ್ನ ಸ್ನೇಹಿತ ವಿಜಯ್ ಕುಮಾರ್ ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಅಂದ್ಹಾಗೆ ಕೊಲೆ ಹೇಗಾಗಿದ್ದು ಅನ್ನೋ ಕ್ರೈಂ‌ ಸೀನ್ ಹೇಳ್ಬಿಡ್ತೀವಿ ನೋಡಿ.. ಈ ಫೋಟೋದಲ್ಲಿ ಕಾಣಿಸ್ತೊರೋ ಈತನೇ ಕೊಲೆಯಾದ ವಿಜಯ್ ಕುಮಾರ್.‌. ನಿನ್ನೆ ಕುಡಿಯೋಕೆ ಬಂದಿದ್ದ ಇದೇ ಚಾಮುಂಡೇಶ್ವರಿ ಬಾರ್ ನಲ್ಲಿ ಈ ಮುಂಚೆ ಕ್ಯಾಶಿಯರ್ ಆಗಿ ಕೆಲಸ ಮಾಡ್ತಿದ್ದ.. ಆರು ತಿಂಗಳ ಮುಂಚೆ ಕ್ಯಾಶಿಯರ್ ಕೆಲಸ ಬಿಟ್ಟು ಡ್ರೈವರ್ ಆಗಿ ಕೆಲಸಕ್ಕೆ ಹೋಗ್ತಿದ್ದ..‌ ಆದ್ರೆ ಆಗಾಗ ಇದೇ ಬಾರ್ ಗೆ ಎಣ್ಣೆ ಹೊಡೆಯೋಕೆ ಬರ್ತಿದ್ದ.. ಹಂಗೆ ನಿನ್ನೆ ಏಳುವರೆ ಸುಮಾರಿಗೆ ಕುಡಿಯೋಕೆ ಅಂತಾ ಬಾರಿಗೆ ಬಂದಿದ್ದ.. ಅದೇ ಟೈಮಿಗೆ ಬಾರಿಗೆ ಬಂದಿದ್ದ ಲೋಕೇಶ್ ಮತ್ತು ಗಿರೀಶ್ ವಿಜಯ್ ಜೊತೆ ಫುಲ್ ಕುಡಿದಿದ್ದಾರೆ.. ಫುಲ್ ಟೈಟಾಗಿದ್ದ ಮೂವರ ನಡುವೆ ಹಣ ಕೊಡೋ ವಿಚಾರಕ್ಕೆ ಜಗಳ ಆಗಿದೆ.. ಈ ವೇಳೆ ವಿಜಯ್.. ಮಾತು ಮಾತು ಬೆಳೀತಿದ್ದಂತೆಯೇ ವಿಜಯ್ ಗಿರೀಶ್ ನನ್ನ ಕುಂಟ ಕುಂಟ ಅಂತಾ ರೇಗಿಸಿದ್ದಾನೆ.. ಈ ವೇಳೆ ಮೂವರ ಮಧ್ಯೆ ಮತ್ತೆ ಜಗಳ ಹೆಚ್ಚಾಗಿದೆ.. ಬಾರ್ ನಿಂದ ಎಳೆದುಕೊಂಡು ಬಂದೋರೆ ಅಲ್ಲಿಂದ ಸ್ವಲ್ಪ ದೂರದ ಜಾಗದಲ್ಲಿ ಬಂದು ವಿಜಯ್ ತಲೆ ಮೇಲೆ ಹಾಲ್ ಬ್ಲಾಕ್ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಮೀಕ್ಷೆಯಿಂದಾಗಿ ಮಕ್ಕಳ ಕಲಿಕೆಗೆ ಭಾರೀ ಪೆಟ್ಟು: ವಿಜಯೇಂದ್ರ ಆಕ್ರೋಶ

ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ತಾಯಿ, ಪತಿಯ ಈ ಬೆದರಿಕೆಯೇ ಕಾರಣವಾಯಿತೇ

ಅಶ್ರಫ್ ಕೊಲೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿ ಭರತ್‌ಗೆ ಬಿಗ್ ಶಾಕ್

ಐಷರಾಮಿ ಕಾರಿಗೆ ಬೇಡಿಕೆಯಿಟ್ಟ ಮಗ, ಕಬ್ಬಿಣದ ಸರಳಿನಿಂದ ಹೊಡೆದ ಅಪ್ಪನ ವಿರುದ್ಧ ಬಿತ್ತು ದೊಡ್ಡ ಕೇಸ್

ಬೆಂಗಳೂರಿನಲ್ಲಿ ಟ್ರಾಫಿಕ್ ಇರೋದು ಒಳ್ಳೇದು ಅನ್ನೋದಾ ಸಚಿವ ಪ್ರಿಯಾಂಕ್ ಖರ್ಗೆ

ಮುಂದಿನ ಸುದ್ದಿ
Show comments