Select Your Language

Notifications

webdunia
webdunia
webdunia
webdunia

ಕರಿದ ಎಣೆಯಲ್ಲಿ ಕಾರು ಚಲಾವಣೆ...!!!

ಕರಿದ ಎಣೆಯಲ್ಲಿ ಕಾರು ಚಲಾವಣೆ...!!!
ಬೆಂಗಳೂರು , ಶನಿವಾರ, 16 ಜುಲೈ 2022 (15:05 IST)
ಬೆಂಗಳೂರು ಮೂಲದ ಅವಿನಾಶ್​​ ನಾರಾಯಣಸ್ವಾಮಿ ಎಂಬಾವರು ತನ್ನ ಕಾರಿಗೆ ಕರಿದ ಎಣ್ಣೆಯನ್ನು ಬಳಸುವ ಮೂಲಕ ಕಾರು ಓಡಿಸುತ್ತಿದ್ದಾರೆ.
ಅವಿನಾಶ್​​ ನಾರಾಯಣಸ್ವಾಮಿ ಕರಿದ ಎಣ್ಣೆಯನ್ನು ಜೈವಿಕ ಇಂಧನವನ್ನಾಗಿ ಮಾರ್ಪಡಿಸಿ ಬಳಸುತ್ತಿದ್ದಾರೆ.
 
ಅವಿನಾಶ್​​ ನಾರಾಯಣಸ್ವಾಮಿ ಅವರೇ ತಯಾರಿಸಿದ ಜೈವಿಕ ಇಂಧನವನ್ನು ಕಾರಿಗೆ ಇಂಧನವಾಗಿ ಬಳಸುತ್ತಿದ್ದಾರೆ. ಇದುವರೆಗೆ ಸುಮಾರು 1.20 ಲಕ್ಷ ಕಿ.ಮೀನಷ್ಟು ದೂರ ಈ ಕಾರು ಕ್ರಮಿಸಿದೆ.
 
ಸಾಮಾನ್ಯವಾಗಿ ಹೊಟೇಲ್​ಗಳಲ್ಲಿ ಎಣ್ಣೆಯನ್ನು ಉಪಯೋಗಿಸಿ ತಿಂಡಿ ಮಾಡುತ್ತಾರೆ. ಹೀಗೆ ಉಪಯೋಗಿಸಿದ ಅಥವಾ ಕರಿದ ಎಣ್ಣೆಯನ್ನು ಅವಿನಾಶ್​​ ನಾರಾಯಣಸ್ವಾಮಿ ಖರೀದಿಸುತ್ತಾರೆ. ಬಳಿಕ 6 ರಿಂದ 7 ಗಂಟೆಗಳ ಕಾಲ ವಿವಿಧ ರೀತಿಯಲ್ಲಿ ಸಂಸ್ಕರಣೆ ಮಾಡುತ್ತಾರೆ. ಒಂದು ಲೀಟರ್​ ಎಣ್ಣೆಗೆ 700 ರಿಂದ 800 ಎಂ.ಎಲ್​ ಜೈವಿಕ ಇಂಧನ ದೊರೆಯುತ್ತದೆ. ಮಾತ್ರವಲ್ಲದೆ, ಇದರಿಂದ ಕಾರು ಕೂಡ ಚಲಿಸುತ್ತದೆ. ಅಂದಹಾಗೆಯೇ ಇತರ ಇಂಧನಕ್ಕೆ ಹೊಲಿಸಿದರೆ ಇದು ಬೆಸ್ಟ್​. ಏಕೆಂದರೆ ಕಡಿಮೆ ಖರ್ಚು ಮತ್ತು ಪರಿಸರ ಸ್ನೇಹಿಯಾಗಿದೆ. ಇಂಧನದ ಬೆಲೆ 60 ರಿಂದ 65 ರೂವರೆಗೆ ವೆಚ್ಚವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಬ್ಬರು ಯುವತಿಯರು ನಡು ರಸ್ತೆಯಲ್ಲಿ ಜಗಳ