Select Your Language

Notifications

webdunia
webdunia
webdunia
webdunia

ಇಬ್ಬರು ಯುವತಿಯರು ನಡು ರಸ್ತೆಯಲ್ಲಿ ಜಗಳ

ಇಬ್ಬರು ಯುವತಿಯರು ನಡು ರಸ್ತೆಯಲ್ಲಿ ಜಗಳ
ಬೆಂಗಳೂರು , ಶನಿವಾರ, 16 ಜುಲೈ 2022 (14:52 IST)
ಯುವತಿಯರ ಗುಂಪೊಂದು ನಡುರಸ್ತೆಯಲ್ಲಿ ಜಗಳವಾಡಿರುವಂತಹ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರಾಖಂಡದ ಹಲ್ದ್ವಾನಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
 
ಯುವತಿಯರ ಎರಡು ಗುಂಪುಗಳ ನಡುವೆ ಭಾರಿ ಜಗಳ ನಡೆದಿದೆ. ನಡುರಸ್ತೆಯಲ್ಲೇ ಹಿಂಸಾತ್ಮಕ ಮಾರಾಮಾರಿ ನಡೆದಿದೆ.
ಎರಡು ಗುಂಪುಗಳ ಯುವತಿಯರು ಪರಸ್ಪರ ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಒಬ್ಬರ ಜುಟ್ಟು ಹಿಡಿದು ಮತ್ತೊಬ್ಬರು ಎಳೆದಾಡಿದ್ದಾರೆ.
 
ಯುವತಿಯೊಬ್ಬಳು ಮತ್ತೊಬ್ಬಾಕೆ ದೊಣ್ಣೆಯಿಂದ ಹೊಡೆದಿದ್ದಾಳೆ. ಅವರು ಪರಸ್ಪರ ತಲೆಗೂದಲನ್ನು ಹಿಡಿದು ಎಳೆದಾಡಿದ್ದಾರೆ. ಈ ವೇಳೆ ಅಲ್ಲಿಗೆ ಇನ್ನೊಬ್ಬ ಮಹಿಳೆ ಪ್ರವೇಶಿಸಿದಳು. ಹರಟೆ ಹೊಡೆಯುತ್ತಾ ನಿಂತಿದ್ದ ಕೆಲವರು ಈ ದೃಶ್ಯಾವಳಿಗಳನ್ನು ರೆಕಾರ್ಡ್ ಮಾಡಿದ್ದಾರೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿದ್ದು, ಘಟನೆ ತಿಳಿಯಾಗಿದೆ ಎನ್ನಲಾಗಿದೆ. ಆದರೆ, ಹೊಡೆದಾಟದ ಹಿಂದಿನ ಕಾರಣ ಏನೆಂಬುದು ಮಾತ್ರ ತಿಳಿದುಬಂದಿಲ್ಲ.
 
ಪಾರ್ಕ್ ಬಳಿ ಜಗಳ ನಡೆದಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಸ್ಥಳೀಯ ಮಾಧ್ಯಮ ವರದಿಗಳು ಹೇಳಿವೆ. ಪೊಲೀಸರು ಘಟನೆಯಲ್ಲಿ ಪಾಲ್ಗೊಂಡ ಯುವತಿಯರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

20 ವಾರಗಳ ಬಳಿಕ ಗರ್ಭಪಾತಕ್ಕೆ ಅವಕಾಶವಿಲ್ಲ: ಹೈಕೋರ್ಟ್