Webdunia - Bharat's app for daily news and videos

Install App

ದೇಶದ ಎಲ್ಲಾ ನಾಗರಿಕರಿಗೆ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳಲು ವೇದಿಕೆ

Webdunia
ಮಂಗಳವಾರ, 28 ಸೆಪ್ಟಂಬರ್ 2021 (17:11 IST)
ದೇಶದ ಎಲ್ಲಾ ನಾಗರಿಕರಿಗೆ ಸ್ವಚ್ಛ ಭಾರತ ಅಭಿಯಾನ (ನಗರ)ದಲ್ಲಿ ಪಾಲ್ಗೊಳ್ಳಲು ವೇದಿಕೆಯನ್ನು ಕಲ್ಪಿಸುವ ಸ್ವಚ್ಛತಾ ಆಪ್ 2.0 ಅನ್ನು ಪ್ರಸ್ತುತಪಡಿಸಲು ಜನಾಗ್ರಹ ಹೆಮ್ಮೆ ಪಡುತ್ತದೆ! ಈ ಆಪ್ ಅನ್ನು ಭಾರತ ಸರ್ಕಾರದ ವಸತಿ ಮತ್ತು ನಗರಾಡಳಿತ ಇಲಾಖೆಯಿಂದ ಜಾರಿಗೊಳಿಸಲಾಗಿದೆ.
 
ಭಾರತದಾದ್ಯಂತ ಇರುವ ನಾಲ್ಕು ಸಾವಿರ ನಗರಗಳಿಂದ ನಾಗರಿಕರು ಸಾರ್ವಜನಿಕವಾಗಿ ಶೌಚ ಮಾಡುವ ಸ್ಥಳಗಳನ್ನು ಗುರುತಿಸಿ, ಶೌಚಾಲಯಗಳನ್ನು ರೇಟ್ ಮಾಡಿ, ಈಗಿರುವ ಶೌಚಾಲಯಗಳ ಸ್ಥಿತಿಯನ್ನು ಸುಧಾರಿಸಿ, ಹೊಸ ಶೌಚಾಲಯಗಳನ್ನು ನಿರ್ಮಿಸಲು ಸ್ವಚ್ಛತಾ ಆಪ್ 2.0 ಪುರಸಭೆಗಳಿಗೆ ಸಹಾಯಮಾಡಲಿವೆ.
 
ಸ್ವಚ್ಛ ಭಾರತ ಅಭಿಯಾನ (ನಗರ)ದ ಅಡಿಯಲ್ಲಿ ಸಮಸ್ಯೆಗಳನ್ನು ಮುಂದಿಡಲು ಜನಪ್ರಿಯ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಆಪ್ 2.0 ಅನ್ನು ನವೀಕೃತ ಫೀಚರ್ ಗಳೊಂದಿಗೆ ಹಾಗು ಪರಿಷ್ಕೃತ UI/UX ಅನುಭವಗಳೊಂದಿಗೆ ಸೋಮವಾರ 27ನೇ ಸೆಪ್ಟೆಂಬರ್ 2021ರಂದು ಭಾರತ ಸರರ್ಕಾದ ವಸತಿ ಮತ್ತು ನಗರಾಡಳಿತ ಇಲಾಖೆಯ ಮಂತ್ರಿಯಾಗಿರುವ ಶ್ರೀ ಹರದೀಪ್ ಸಿಂಗ್ ಪುರಿಯವರ ಸಮ್ಮುಖದಲ್ಲಿ ಜಾರಿ ಮಾಡಲಾಯಿತು.
 
ಈ ಆಪ್ ನನ್ನ ಜನಾಗ್ರಹ ಸೆಂಟರ್ ಫ಼ಾರ್ ಸಿಟಿಝೆನ್ಷಿಪ್ ಅಂಡ್ ಡೆಮಾಕ್ರಸಿಯಿಂದ ವಸತಿ ಮತ್ತು ನಗರಾಡಳಿತ ಇಲಾಖೆಗಾಗಿ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ನಾಗರಿಕರು ಸ್ವಚ್ಛತೆಗೆ ಸಂಬಂಧಿಸದಂತೆ 17 ವರ್ಗಗಳ ಅಡಿಯಲ್ಲಿ ದೂರುಗಳನ್ನು ಒಂಬತ್ತು ಭಾಷೆಗಳಲ್ಲಿ ದಾಖಲಿಸಬಹುದು.
 
ಸ್ವಚ್ಛತಾ ಆಪ್ 2.0ನಲ್ಲಿ ನಾಲ್ಕು ಸಾವಿರ ನಗರಗಳಲ್ಲಿ ವಾಸಿಸುತ್ತಿರುವ ಜನರು ದೂರುಗಳನ್ನು ದಾಖಲಿಸಬಹುದು, ಇತರರ ದೂರುಗಳನ್ನು ಅಪ್ ವೋಟ್ ಮಾಡಬಹುದು, ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು ಮತ್ತು ಸಾರ್ವಜನಿಕ ಅರೋಗ್ಯ ಮೂಲಸೌಕರ್ಯಗಳನ್ನು, ಸ್ವಚ್ಛತೆಯನ್ನು ಹಾಗು ನೈರ್ಮಲ್ಯವನ್ನು ಅಭಿವೃದ್ಧಿಪಡಿಸಲು ನಗರಾಡಳಿತ ಇಲಾಖೆಯೊಂದಿಗೆ ಕೈ ಜೋಡಿಸಬಹುದು.
 
ನಾಗರಿಕರು ಈಗ ಯೆಲ್ಲೊ ಸ್ಪಾಟ್ ಅಂದರೆ, ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಲು ಬಳಸುವ ಸ್ಥಳಗಳನ್ನು ಗುರುತಿಸಿ, ಸಾರ್ವಜನಿಕ ಶೌಚಾಲಯಗಳಿಗೆ ರೇಟ್ ನೀಡಿ, ಈಗಿರುವ ಶೌಚಾಲಯಗಳ ಸ್ಥಿತಿಯನ್ನು ಸುಧಾರಿಸಿ, ಹೊಸ ಶೌಚಾಲಯಗಳನ್ನು ನಿರ್ಮಿಸಲು ಪುರಸಭೆಗಳಿಗೆ ಸಹಾಯಮಾಡಲಿವೆ. ಹೊಸ ಆಪ್ ನಲ್ಲಿ 360 ಡಿಗ್ರಿ ಫೀಡ್ ಬ್ಯಾಕ್ ನ ಸವಲತ್ತನ್ನು ಕೂಡ ನೀಡಲಾಗಿದ್ದು, ಸಮಸ್ಯೆಯನ್ನು ಬಗೆಹರಿಸಿದ ನಂತರ ಇಲ್ಲಿ ಫೋಟೋ ವನ್ನು ಲಗತ್ತಿಸಿ ಸಾಕ್ಷಿಯನ್ನು ನೀಡುವುದು ಕಡ್ಡಾಯಗೊಳಿಸಲಾಗಿದೆ.
 
"ಜವಾಬ್ದಾರಿಯುತ ನಾಗರಿಕರಾದ ನಾವು, ಹಲವಾರು ಬಾರಿ ಕೆಟ್ಟ ಶೌಚಾಲಯಗಳನ್ನು, ಯೆಲ್ಲೊ ಸ್ಪಾಟ್ ಗಳನ್ನು, ತ್ಯಾಜ್ಯ ಸಂಗ್ರಹಣೆಯಾದ ಬೀದಿಗಳನ್ನು ನೋಡುತ್ತೇವೆ ಮತ್ತು ಎಲ್ಲೆಡೆ ಓಡಾಡದೆ ಅವುಗಳನ್ನು ಸರಿಪಡಿಸಲು ಹಾತೊರೆಯುತ್ತೇವೆ. ಜನಾಗ್ರಹ ಎಸ್ ಬಿ ಎಂ 2.0 ಅಡಿಯಲ್ಲಿ ನಾಗರೀಕರಿಗಾಗಿ ಹಾಗು ಇಂಜೀನಿಯರ್ ಗಳಿಗಾಗಿ ಸ್ವಚ್ಛತಾ ಆಪ್ ಗಳನ್ನು ಪ್ರಸ್ತುತಪಡಿಸಲು ಹೆಮ್ಮೆ ಪಡುತ್ತಿದೆ. ಇದರಲ್ಲಿ ಸಮಸ್ಯೆಗಳನ್ನು ಸ್ಮಾರ್ಟ್ ಫೋನ್ ಗಳ ಸಹಾಯದಿಂದ ಸರಿಪಡಿಸಬಹುದಾಗಿದೆ. ಇದಕ್ಕೆಂದೇ ನಾಲ್ಕು ಸಾವಿರ ನಗರಗಳಲ್ಲಿ ಒಳ್ಳೆಯ ಬ್ಯಾಕ್ ಎಂಡ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದ್ದು, ಇದರ ಮೂಲಕ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ತಕ್ಷಣ ದೂರು ಸಿಗಲಿದ್ದು, ಅವರು ಆ ಕೂಡಲೇ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ.
ಸ್ವಚ್ಛ ಭಾರತ ರಾಂಕ್ ನೀಡುವ ವ್ಯವಸ್ಥೆಯು ಅಧಿಕಾರಿಗಳು ಆದಷ್ಟು ಬೇಗನೆ ಸಮಸ್ಯೆಯನ್ನು ಬಗೆಹರಿಸಲು ಉತ್ತೇಜಿಸಲಿದೆ. ಸಾರ್ವಜನಿಕರು ಬೇರೆಯವರು ನೀಡಿರುವ ದೂರುಗಳನ್ನು ಅಪ್ ವೋಟ್ ಮಾಡುವ ಮೂಲಕ ತಮ್ಮ ತಮ್ಮ ಪ್ರದೇಶಗಳನ್ನು ಅಭಿವೃದ್ಧಿ ಮಾಡಬಹುದಾಗಿದೆ. ಇದು ಇಂದೇ ಸ್ವಚ್ಛತಾ ಆಪ್ ಅನ್ನು ಡೌನ್ಲೋಡ್ ಮಾಡಿ ಒಬ್ಬ ಜವಾಬ್ದಾರಿಯುತ ಸಾರ್ವಜನಿಕರಾಗಲು ನಾವು ನೀಡುತ್ತಿರುವ ಕರೆಯಾಗಿದೆ" ಎಂದು ಜನಾಗ್ರಹದ ನಾಗರಿಕ ಸಹಾಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಳವಳ್ಳಿಯವರು ಹೇಳಿದರು.
 
ಡಿಜಿಟಲ್ ಇಂಡಿಯಾದಲ್ಲಿ 41 ರತ್ನಗಳ ಪಟ್ಟಿಯಲ್ಲಿ ಒಂದಾದ ಸ್ವಚ್ಛತಾ ಆಪ್ ಅನ್ನು ಆಗಸ್ಟ್ 2016ರಲ್ಲಿ ಜಾರಿಮಾಡಲಾಯಿತು. ಇದರಲ್ಲಿ ಈ ವರೆಗೆ 1.8 ಕೋಟಿ ನಾಗರಿಕರು ದಾಖಲಾಗಿದ್ದಾರೆ. ಇದರಲ್ಲಿ ದಾಖಲಿಸಲಾದ 2.3 ಕೋಟಿ ದೂರುಗಳಲ್ಲಿ, ಶೇಕಡಾ 93rರಷ್ಟು ಸಮಸ್ಯೆಗಳನ್ನು ಬಗೆಹರಿಸಲಾಗಿದೆ.
ಕೋವಿಡ್-19ಕ್ಕೆ ಸಂಬಂಧಿಸಿದಂತೆ ದೂರುಗಳನ್ನು ದಾಖಲಿಸಲು ಈ ಆಪ್ ಅನ್ನು ಮಾರ್ಚ್ 2020ರಲ್ಲಿ ನವೀಕರಿಸಲಾಗಿತ್ತು. ಈಗ ಅಪ್ ಡೇಟ್ ಮಾಡಲಾಗಿರುವ ಆಪ್ ನಲ್ಲಿ ನಾಗರಿಕರು ಕೇವಲ ದೂರುಗಳನ್ನು ದಾಖಲಿಸುವುದಲ್ಲದೆ ನಗರದ ಸರ್ವತೋಮುಖ ಬೆಳವಣಿಗೆಯನ್ನು ಉತ್ತೇಜಿಸುವಿದಾಗಿದೆ.
 
"ಮೂರುಸಾವಿರಕ್ಕೂ ಹೆಚ್ಚು ನಗರಗಳಲ್ಲಿ ವಾಸಿಸುವ 55 ಲಕ್ಷಕ್ಕಿಂತ ಹೆಚ್ಚು ಜನರು ಬಳಸುವ ಸ್ವಚ್ಛತಾ ಆಪ್, ಸಾರ್ವಜನಿಕರ ಸಮಸ್ಯೆಯನ್ನು ಆಲಿಸುವ ಅತಿ ದೊಡ್ಡ ವೇದಿಕೆಗಳಲ್ಲಿ ಒಂದಾಗಿದೆ. ಜನಾಗ್ರಹವು ಸುಮಾರು ಐದು ವರ್ಷಗಳಿಂದ ಭಾರತ ಸರ್ಕಾರದ ವಸತಿ ಸಚಿವಾಲಯದೊಂದಿಗೆ ಜೊತೆಗೂಡಿ, ಸ್ವಚ್ಛತಾ ಅಪ್ ನನ್ನ ಸಿದ್ಧಪಡಿಸಿರುವುದು ಸಂತಸದ ಸಂಗತಿಯಾಗಿದೆ. ಸ್ವಚ್ಛತೆಯನ್ನು ಜನರ ನಡುವೆ ಕೊಂಡು ಹೋಗುವ ಮೂಲಕ ಸ್ವಚ್ಛ ಭಾರತ ಅಭಿಯಾನವನ್ನು ಮನೆಮಾತಾಗಿಸುವ ನಿಟ್ಟಿನಲ್ಲಿ ನಮ್ಮ ಹಾಗು ಸರ್ಕಾರದ ಪ್ರಯತ್ನ ಜಾರಿಯಲ್ಲಿದೆ.
ಭಾರತದ ನಗರಗಳಲ್ಲಿ ಜೀವನ ಗುಣಮಟ್ಟವನ್ನು ಬದಲಾಯಿಸುವ ತಾಕತ್ತು ನಾಲ್ಕು ಸಾವಿರ ನಗರಗಳಲ್ಲಿ ಇರುವ 80,000ಕ್ಕಿಂತಲೂ ಹೆಚ್ಚು ವಾರ್ಡ್ ಗಳಲ್ಲಿ ವಾಸಿಸುವ ನಾಗರಿಕರನ್ನು, ಕೌನ್ಸಿಲರ್ ಗಳನ್ನು ಮತ್ತು ವಾರ್ಡ್ ಅಧಿಕಾರಿಗಳನ್ನು ಸಬಲೀಕರಿಸುವಲ್ಲಿದೆ ಎಂಬುದು ನಮ್ಮ ಧೃಡವಾದ ನಂಬಿಕೆ. ಸ್ವಚ್ಛತಾ ಆಪ್ ಇದೆ ಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಸಹಕಾರಿಯಾಗಲಿದೆ" ಎಂದು ಜನಾಗ್ರಹದ ಸಿಇಓ ಶ್ರೀಕಾಂತ್ ವಿಶ್ವನಾಥನ್ ತಿಳಿಸಿದರು.
swach

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments