Select Your Language

Notifications

webdunia
webdunia
webdunia
webdunia

ಮಾಜಿ ಸಚಿವ ಶ್ರೀರಂಗದೇವರಾಯಲು ಇನ್ನಿಲ್ಲ

ಮಾಜಿ ಸಚಿವ ಶ್ರೀರಂಗದೇವರಾಯಲು ಇನ್ನಿಲ್ಲ
ಕೊಪ್ಪಳ , ಬುಧವಾರ, 23 ಆಗಸ್ಟ್ 2023 (08:59 IST)
ಕೊಪ್ಪಳ : ಸರಳ, ಸಜ್ಜನ ರಾಜಕಾರಣಿ, ಕನಕಗಿರಿ ಮತ್ತು ಗಂಗಾವತಿ ವಿಧಾನಸಭೆ ಕ್ಷೇತ್ರದಿಂದ ಸತತ ಐದು ಬಾರಿ ಶಾಸಕರಾಗಿದ್ದ, ಮಾಜಿ ಸಚಿವ ಶ್ರೀರಂಗದೇವರಾಯಲು (85) ಮಂಗಳವಾರ ಸಂಜೆ ನಿಧನರಾಗಿದ್ದಾರೆ.

ಕಳೆದ ಕೆಲ ದಿನದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಗಂಗಾವತಿಯ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಲಲಿತಾರಾಣಿ ಪತ್ನಿ, ಪುತ್ರರಾದ ಉದ್ಯಮಿ ಕೃಷ್ಣದೇವರಾಯ, ವೈದ್ಯ ವಿ.ಎಸ್.ಎನ್.ಡಿ ರಾಯಲು, ಪುತ್ರಿ ಲತಾ ಸೇರಿ ಅಪಾರ ಬಂಧು-ಬಳಗವಿದೆ. ಮೃತರ ಅಂತ್ಯಸಂಸ್ಕಾರವು ಕ್ಷತ್ರೀಯ ವಿಧಿ-ವಿಧಾನಗಳಂತೆ ಗಂಗಾವತಿ ತಾಲೂಕು ಆನೆಗೊಂದಿ ಗ್ರಾಮದಲ್ಲಿ ಬುಧವಾರ (ಆ.23) ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ವಿಜಯನಗರ ಸಾಮ್ರಾಜ್ಯದ ಮೂಲ ರಾಜಧಾನಿಯಾಗಿದ್ದ ಆನೆಗೊಂದಿ ರಾಜವಂಶಕ್ಕೆ ಸೇರಿದವರು. ಅರವೀಡು ರಾಜವಂಶಸ್ಥ ಶ್ರೀರಂಗದವರಾಯಲು ನರಪತಿ ಸಂಸ್ಥಾನಕ್ಕೆ ಸೇರಿದವರು. ಕಳೆದ 1938ರಲ್ಲಿ ತಂದೆ ಶ್ರೀವೆಂಕಟದೇವರಾಯಲು- ತಾಯಿ ಶ್ರೀಲಕ್ಷ್ಮಿದೇವಮ್ಮರ ಮಗನಾಗಿ ಗಂಗಾವತಿ ತಾಲೂಕು ಆನೆಗೊಂದಿ ಗ್ರಾಮದಲ್ಲಿ ಶ್ರೀರಂಗದೇವರಾಯಲು ಜನಿಸಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಸಾಕಷ್ಟು ಜನಪರ ಯೋಜನೆ ಕ್ಷೇತ್ರಕ್ಕೆ ತಂದ ಶ್ರೇಯಸ್ಸು ರಂಗದೇವರಾಯಲು ಅವರಿಗೆ ಸೇರುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸಿಎಂ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ