Publish Date: Wed, 23 Aug 2023 (07:34 IST)
Updated Date: Wed, 23 Aug 2023 (08:57 IST)
ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಇಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಸಭೆಯಲ್ಲಿ ವಿಪಕ್ಷಗಳ ಸಲಹೆಯನ್ನು ಸರ್ಕಾರ ಪಡೆಯಲಿದೆ. ಸುಪ್ರೀಂಕೋರ್ಟ್,ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲನೆ ಹಾಗೂ ಮುಂದಿನ ಕಾನೂನು ಹೋರಾಟ ಹೇಗೆ ಎಂಬ ಬಗ್ಗೆಯೂ ಚರ್ಚೆ ಆಗಲಿದೆ.
ಕೂಡಲೇ ತಮಿಳುನಾಡಿಗೆ ನೀರು ಬಂದ್ ಮಾಡಿದರೆ ಎದುರಾಗುವ ಕಾನೂನು ತೊಡಕುಗಳು, ಸವಾಲುಗಳ ಬಗ್ಗೆ ವಕೀಲರ ಅಭಿಪ್ರಾಯವನ್ನು ಸಿಎಂ ಆಲಿಸಲಿದ್ದಾರೆ.