Publish Date: Tue, 26 Sep 2017 (11:16 IST)
Updated Date: Tue, 26 Sep 2017 (11:22 IST)
ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅಬ್ಸರ್ವೇಶನ್ ದೃಷ್ಟಿಯಿಂದ ಎರಡು ದಿನ ಐಸಿಯೂನಲ್ಲೇ ಇರಲಿದ್ದಾರೆ ಎಂದು ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕುಮಾರಸ್ವಾಮಿಯವರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿದೆ. ಆರಾಮವಾಗಿ ಮಾತನಾಡುತ್ತಾರೆ ಮತ್ತು ನಡೆದಾಡುತ್ತಾರೆ. ನಾಳೆಯೇ ಡಿಸ್ಚಾರ್ಜ್ ಮಾಡಿದರೂ ಸಮಸ್ಯೆ ಇಲ್ಲ. ಆದರೆ, ಕುಮಾರಸ್ವಾಮಿಯವರಿಗೆ ವಿಶ್ರಾಂತಿಯ ಅಗತ್ಯವಿದೆ. ಸೋಂಕು ತಗಲಬಾರದು. ಹೀಗಾಗಿ, ಆಸ್ಪತ್ರೆಯಲ್ಲೇ ಇರಿಸಿಕೊಂಡಿದ್ದೇವೆ. 2 ದಿನ ಅಬ್ಸರ್ವೇಶನ್ ದೃಷ್ಟಿಯಿಂದ ಐಸಿಯೂನಲ್ಲೇ ಇರಲಿದ್ದಾರೆ ಎಂದು ವೈದ್ಯಡಾ. ಸತ್ಯಕಿ ನಂಬಾಲ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶನಿವಾರವಷ್ಟೇ ಕುಮಾರಸ್ವಾಮಿಯವರಿಗೆ ಅಪೊಲೋ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆದಿತ್ತು. 2007ರಲ್ಲಿ ಅಳವಡಿಸಿದ್ದ ಹೃದಯದ ಟಿಶ್ಯೂ ವಾಲ್ವ್ ಬದಲಾವಣೆ ಮಾಡಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ