Publish Date: Wed, 28 Feb 2024 (19:00 IST)
Updated Date: Wed, 28 Feb 2024 (19:35 IST)
ಬೆಂಗಳೂರು-ಮಾಜಿ ಐಎಎಸ್ ಅಧಿಕಾರಿ ಹಾಗೂ ನಟ ಕೆ.ಶಿವರಾಮ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.ಅವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ
ಶಿವರಾಮ್ ಅವರಿಗೆ 12 ದಿನಗಳ ಹಿಂದೆ ತೀವ್ರ ಹೃದಯಾಘಾತವಾಗಿದೆ.ಅಂದಿನಿಂದ ಇಂದಿನವರೆಗೂ ಶಿವರಾಮ್ ಅವರನ್ನು ಐಸಿಯುನಲ್ಲಿರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಇಂದು ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ. ಶಿವರಾಮ್ ಅವರಿಗೆ ಈಗ 71 ವರ್ಷ ವಯಸ್ಸಾಗಿದ್ದು, ಶಿವರಾಮ್ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.ಶಿವರಾಮ್ ಅವರು ಟೈಗರ್, ಯಾರಿಗೆ ಬೇಡ ದುಡ್ಡು, ಬಾ ನಲ್ಲೆ ಮಧುಚಂದ್ರಕೆ ಸೇರಿ ಹಲವು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.