Select Your Language

Notifications

webdunia
webdunia
webdunia
webdunia

ಎಂ.ಬಿ.ಪಾಟೀಲರದ್ದು ವಿನಾಶಕಾಲೇ ವಿಪರೀತ ಬುದ್ಧಿ: ಯಡಿಯೂರಪ್ಪ

ಎಂ.ಬಿ.ಪಾಟೀಲರದ್ದು ವಿನಾಶಕಾಲೇ ವಿಪರೀತ ಬುದ್ಧಿ: ಯಡಿಯೂರಪ್ಪ
ಬಾಗಲಕೋಟೆ , ಬುಧವಾರ, 13 ಸೆಪ್ಟಂಬರ್ 2017 (11:55 IST)
ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕೆಂದು ಹೇಳಿ ಪೇಚಿಗೆ ಸಿಲುಕಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಪಾಟೀಲರದ್ದು ಅವರದ್ದು ವಿನಾಶ ಕಾಲೇ ವಿಪರೀತ ಬುದ್ಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಟೀಕಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಸಿದ್ಧಗಂಗಾ ಶ್ರೀಗಳ ಹೆಸರನ್ನ ಎಳೆದು ತರಲಾಗಿದೆ. ಇನ್ನುಮುಂದೆ ಸಿದ್ಧಗಂಗಾ ಶ್ರೀಗಳ ಹೆಸರನ್ನ ಎಲ್ಲಿಯೂ ಬಳಸದೇ ಮೌನವಾಗಿದ್ದರೆ ಅವರಿಗೆ ಗೌರವ ತರುತ್ತದೆ. ಇಲ್ಲವಾದರೆ, ವಿರಶೈವರಲ್ಲದೆ ಯಾವುದೇ ಸಮುದಾಯದ ಜನ ಅವರನ್ನ ಒಪ್ಪುವುದಿಲ್ಲ ಎಂದು ಹೇಳಿದ್ಧಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ಯಾವ ನಿರ್ಧಾರ ಕೈಗೊಳ್ಳುತ್ತದೋ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ರಾಜಕೀಯವಾಗಿ ಈ ಬಗ್ಗೆ ಗೊಂದಲ ಮೂಡಿಸುವುದು ಬೇಡವೆಂದು ಯಡಿಯೂರಪ್ಪ ಹೇಳಿದ್ದಾರೆ. ಇದೇವೇಳೆ, ಕೂಡಲಸಂಗಮದಲ್ಲಿ ಸಚಿವ ಎಂ.ಬಿ. ಪಾಟೀಲ್ ಧ್ಯಾನ ಮಾಡಿರುವ ಬಗ್ಗೆ ವ್ಯಂಗ್ಯವಾಡಿರುವ ಯಡಿಯೂರಪ್ಪ, ಪ್ರಾಯಶ್ತಿತ್ತಕ್ಕಾಗಿ ಹೋಗಿರಬಹುದೆಂದು ಹೇಳಿದ್ಧಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೃದ್ಧರ ಚಿಕಿತ್ಸೆಗೆ 6 ಸಾವಿರ ರೂ. ನೀಡಿದ ಸಿಎಂ ಸಿದ್ದರಾಮಯ್ಯ