Select Your Language

Notifications

webdunia
webdunia
webdunia
webdunia

ಸ್ಟೇರಿಂಗ್ ಸಮಿತಿ ರಚನೆ : ಕರ್ನಾಟಕದ ಮೂವರಿಗೆ ಸ್ಥಾನ

webdunia
ಬೆಂಗಳೂರು , ಗುರುವಾರ, 27 ಅಕ್ಟೋಬರ್ 2022 (07:28 IST)
ನವದೆಹಲಿ : ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಲೇ ಮಲ್ಲಿಕಾರ್ಜುನ ಖರ್ಗೆಯವರು ಹೊಸ ಸ್ಟೇರಿಂಗ್ ಕಮಿಟಿಯನ್ನು ರಚನೆ ಮಾಡಿದ್ದಾರೆ.

ಕಾಂಗ್ರೆಸ್ನ ಹೊಸ ಕಮಿಟಿಯಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ ದೊರಕಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ನ ಹೊಸ ಸಮಿತಿಯಲ್ಲಿ ಸ್ಥಾನ ದೊರಕಿದೆ.

ಮಾತ್ರವಲ್ಲದೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರನ್ನೂ ಸ್ಟೇರಿಂಗ್ ಕಮಿಟಿಯ ಭಾಗವನ್ನಾಗಿ ಮಾಡಲಾಗಿದೆ.

ಸಿಡಬ್ಲ್ಯುಸಿ ಸ್ಥಾನದಲ್ಲಿ ಸ್ಟೇರಿಂಗ್ ಕಮಿಟಿ ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟು 47 ಮಂದಿಯ ಸ್ಟೇರಿಂಗ್ ಕಮಿಟಿ ರಚನೆಯಾಗಿದೆ. ಇದರಲ್ಲಿ ಕರ್ನಾಟಕದ ಹೆಚ್.ಕೆ ಪಾಟೀಲ್, ಕೆ.ಹೆಚ್ ಮುನಿಯಪ್ಪ ಹಾಗೂ ದಿನೇಶ್ ಗುಂಡೂರಾವ್ ಅವರಿಗೆ ಸ್ಥಾನ ದೊರಕಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ನೋಟ್ ನಲ್ಲಿ ಮಹಾತ್ಮ ಗಾಂಧಿಜೀ ಚಿತ್ರ ಬಿಟ್ಟು ಬೇರೆ ಚಿತ್ರ ಹಾಕಬಾರದು-ವಾಟಾಳ್ ನಾಗರಾಜ್