ಈ ಕಾರಣಕ್ಕಾಗಿ ಮಗನನ್ನೇ ಕೊಚ್ಚಿ ಕೊಲೆ ಮಾಡಿದ ತಂದೆ

ಭಾನುವಾರ, 28 ಜೂನ್ 2020 (11:51 IST)
Normal 0 false false false EN-US X-NONE X-NONE

ಚಾಮರಾಜನಗರ : ಆಸ್ತಿಯ ವಿಚಾರಕ್ಕೆ ತಂದೆ ಮಗನನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊನ್ನೆ ಗೌಡನಹುಂಡಿಯಲ್ಲಿ ನಡೆದಿದೆ.

ಮಲ್ಲಿಕಾರ್ಜುನಪ್ಪ ಕೊಲೆಯಾದ ದುರ್ದೈವಿ, ಮಹದೇವಪ್ಪ ಕೊಲೆ ಮಾಡಿದ ಆರೋಪಿ. ಆಸ್ತಿಯ ವಿಚಾರಕ್ಕೆ ಅಪ್ಪ ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಇಂದು ಬೆಳಿಗ್ಗೆ ಜಮೀನಿನ ಬಳಿ ಮರ ಕಡಿಯಲು ಮಲ್ಲಿಕಾರ್ಜುನಪ್ಪ ಹೋದಾಗ ಅಲ್ಲಿಗೆ ಬಂದ ತಂದೆ ಮಹದೇವಪ್ಪ ಮತ್ತು ಸಹೋದರ ಮಂತ್ರಪ್ಪ ಜಗಳಕ್ಕೀಳಿದು ಕೊಡಲಿಯಿಂದ ಮಲ್ಲಿಕಾರ್ಜುನಪ್ಪನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಈ ಘಟನೆ ಬಗ್ಗೆ ಗ್ರಾಮಸ್ಥರು ಗುಂಡ್ಲುಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ SSLC ಪರೀಕ್ಷೆ ಬರೆದ ವಿದ್ಯಾರ್ಥಿಗೆ ಕೊರೊನಾ