Publish Date: Tue, 26 Nov 2024 (18:20 IST)
Updated Date: Tue, 26 Nov 2024 (18:25 IST)
ಬೆಂಗಳೂರಿನ ಬಸವನಗುಡಿ ಕಡಲೆ ಪರಿಷೆಗೆ ಸೋಮವಾರ ಚಾಲನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ರೈತರು ರಾಜ್ಯದಲ್ಲಿ ಎಲ್ಲೇ ಇರ್ಲಿ, ಅವರು ಬೆಳೆದ ಕಡ್ಲೆಕಾಯಿ ಅವರ ಬದುಕನ್ನು ಹಸನು ಮಾಡಲಿ ಎಂದು ಹಾರೈಸಿದರು.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಹಾಕಿದ ಅವರು, ಕಡಲೆಕಾಯಿಗೂ ನನಗೂ ಬಿಡಿಸಲಾಗದ ಬಾಂಧವ್ಯ. ಕಡಲೆಕಾಯಿ ತಿನಿಸುಗಳು ಪ್ರಯಾಣದ ವೇಳೆ ನನ್ನ ಪಾರ್ಟ್‌ನರ್ ಮಾತ್ರ ಅಲ್ಲ, ನನ್ನ ಆಲ್‌ಟೈಮ್ ಫೇವರಿಟ್ ಕೂಡ ಹೌದು. ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಚಾಲನೆ ನೀಡಿದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇನ್ನೆಷ್ಟು ದಿನ ಇರಲಿದೆ ಕಡಲೆ ಪರಿಷೆ: ಬೆಂಗಳೂರು ಕಡಲೆ ಪರಿಷೆ ಪ್ರಾರಂಭವಾಗಿ ಈಗಾಗಲೇ ಮೂರು ದಿನಗಳಾಗಿವೆ. ಸೋಮವಾರದಿಂದ ಅಧಿಕೃತವಾಗಿ ಕಡಲೆ ಪರಿಷೆ ಪ್ರಾರಂಭವಾಗಿದೆ. ಪ್ರತಿ ವರ್ಷವೂ ಕಾರ್ತಿಕ ಮಾಸದ ಸೋಮವಾರದಂದು ಬೆಂಗಳೂರಿನ ಬಸವನಗುಡಿಯ ಕಡಲೆ ಪರಿಷೆ ನಡೆಯುತ್ತದೆ.