Publish Date: Fri, 08 Nov 2024 (18:45 IST)
Updated Date: Fri, 08 Nov 2024 (20:22 IST)
ರಾಮನಗರ: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ದಿನೇ ದಿನೇ ರಂಗೇರುತ್ತಿದ್ದು ಎನ್‌ಡಿಎ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪರ ಬಿರುಸಿನ ಪ್ರಚಾರವನ್ನು ಮಾಡಲಾಗುತ್ತಿದೆ.
ಇಂದು ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ಮಾಡಿದ ದೇವೇಗೌಡ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಈ ಸರ್ಕಾರವನ್ನು ತೆಗೆದುಹಾಕುವವರೆಗೂ ವಿರಮಿಸುವುದಿಲ್ಲ ಎಂದು ಹೇಳಿದ್ದರು.
ಇದೀಗ ದೇವೇಗೌಡದ ಹೇಳಿಕೆಗೆ ರಾಮನಗರದಲ್ಲಿ ಕೌಂಟರ್ ನೀಡಿದ ಡಿಕೆಶಿ ಡಿಕೆ ಶಿವಕುಮಾರ್ ಅವರು, ಕುಮಾರಸ್ವಾಮಿ ಮಾಜಿ ಸಿಎಂ, ಮಾಜಿ ಪ್ರಧಾನಿ ಪುತ್ರ, ನಾನು ಬಡ ರೈತನ ಮಗ, ನನ್ನ ಮತ್ತು ಕುಮಾರಸ್ವಾಮಿ ನಡುವೆ ಹೋಲಿಕೆ ಸಾಧ್ಯವಿಲ್ಲ. "ಅವರು (ಕುಮಾರಸ್ವಾಮಿ) ಹಿಮಾಲಯ, ನಾನು ಜನರ ಪ್ರಾಮಾಣಿಕ ಸೈನಿಕ" ಎಂದು ಹೇಳಿದರು.
ಸರ್ಕಾರವನ್ನು ತೆಗೆದುಹಾಕುವ ಕುರಿತ ದೇವೇಗೌಡರ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್".... ಇದು ಸುಲಭವಾಗಿ ತೆಗೆಯುವ ಕಡಲೆ ಗಿಡವಲ್ಲ.... ಇದು 136 ಶಾಸಕರ ಬಲಿಷ್ಠ ಸರ್ಕಾರವಾಗಿದೆ. ಇದು ಜನರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದೆ ಎಂದು ತಿರುಗೇಟು ನೀಡಿದರು.