Select Your Language

Notifications

webdunia
webdunia
webdunia
Sunday, 13 April 2025
webdunia

ಕೊಳ್ಳೇಗಾಲ: ಬದುಕಿರುವಾಗಲೇ ಶವಸಂಸ್ಕಾರದ ದೃಢೀಕರಣ ಪತ್ರ ನೀಡಿದ ನಗರಸಭೆ

Kollegala Death Certificate Mystry

Sampriya

ಚಾಮರಾಜನಗರ , ಶುಕ್ರವಾರ, 8 ನವೆಂಬರ್ 2024 (17:08 IST)
Photo Courtesy X
ಚಾಮರಾಜನಗರ: ಬದುಕಿರುವ  ವ್ಯಕ್ತಿಯನ್ನೇ ಶವಸಂಸ್ಕಾರ ಮಾಡಲಾಗಿದೆ ಎಂದು ದೃಢೀಕರಣ ಪತ್ರಕೊಟ್ಟು ಕೊಳ್ಳೇಗಾಲ ನಗರಸಭೆ ಎಡವಟ್ಟು ಮಾಡಿದೆ.

ನಿಧನರಾಗಿದ್ದ ತಾಯಿಯ ಶವಸಂಸ್ಕಾರದ ದೃಢೀಕರಣ ಪತ್ರಕ್ಕಾಗಿ ಶಂಕರ್ ಎಂಬವರು ಅರ್ಜಿ ಸಲ್ಲಿಸಿದ್ದರು. ಆದರೆ ತಾಯಿಯ ಶವಸಂಸ್ಕಾರದ ದೃಢೀಕರಣ ಪತ್ರವನ್ನು ನೀಡುವ ಬದಲು ಶಂಕರ್ ಅವರ ಶವಸಂಸ್ಕಾರ ನೆರವೇರಿಸಲಾಗಿದೆ ಎಂದು ನಗರಸಭೆ ಅಧಿಕಾರಿಗಳು ದೃಢೀಕರಣ ಪತ್ರ ನೀಡಿದ್ದಾರೆ.

ಕೊಳ್ಳೇಗಾಲ ಕುರುಬರ ಬೀದಿಯ ನಿವಾಸಿಯಾಗಿರುವ ಶಂಕರ್ ಅವರ ಪುಟ್ಟಮ್ಮ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದರು. ಅ.27 ರಂದು ಕೊಳ್ಳೇಗಾಲಕ್ಕೆ ತಂದು ಶವಸಂಸ್ಕಾರ ಮಾಡಲಾಗಿತ್ತು. ಈ ಬಗ್ಗೆ ದೃಢೀಕರಣ ಪತ್ರಕ್ಕಾಗಿ ಪುಟ್ಟಮ್ಮ ಅವರ ಪುತ್ರ ಶಂಕರ್ ಅರ್ಜಿ ಸಲ್ಲಿಸಿದ್ದರು.

ನಿಧನರಾದ ತಾಯಿಯ ಆಧಾರ್ ಕಾರ್ಡ್ ಸಹ ನೀಡಿದ್ದರು. ಆದರೆ, ಶಂಕರ್ ಅವರ ಶವಸಂಸ್ಕಾರ ಮಾಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ದೃಢೀಕರಣ ಪತ್ರ ನೀಡಿದ್ದಾರೆ. ತಮ್ಮ ಶವಸಂಸ್ಕಾರ ಎಂದು ಉಲ್ಲೇಖಿಸಿರುವ ದೃಢೀಕರಣ ಪತ್ರ ನೋಡಿ ವ್ಯಕ್ತಿ ಶಾಕ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಅರೆಹುಚ್ಚ, ಜಿಲೇಬಿ ಫ್ಯಾಕ್ಟರಿ ಮಾಡ್ತಾನಂತ: ಬಸನಗೌಡ ಪಾಟೀಲ್ ಯತ್ನಾಳ್