Select Your Language

Notifications

webdunia
webdunia
webdunia
webdunia

ತಕ್ಷಣವೇ ಐದು ಲಕ್ಷ ರೂ. ಪರಿಹಾರ ವಿತರಣೆ?

ಕಲಬುರಗಿ
ಕಲಬುರಗಿ , ಭಾನುವಾರ, 24 ಜುಲೈ 2022 (11:44 IST)
ಕಲಬುರಗಿ : ಶುಕ್ರವಾರ ರಾತ್ರಿ ಕೊಚ್ಚಿ ಹೋಗಿದ್ದ ವ್ಯಕ್ತಿಯೊಬ್ಬ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಕಡಣಿ ಗ್ರಾಮದ ಹೊರವಲಯದ ಹಳ್ಳಿದಲ್ಲಿ ನಡೆದಿದೆ.

ಸಿದ್ದು ಕೆರಮಗಿ, ಮಳೆ ಅನಾಹುತಕ್ಕೆ ಬಲಿಯಾದ ವ್ಯಕ್ತಿ. ಒಂದು ಕಿಲೋ ಮೀಟರ್ನಷ್ಟು ದೂರದಲ್ಲಿ ಮುಳ್ಳು ಕಂಟಿಯಲ್ಲಿ ಸಿದ್ದು ಕೆರಮಗಿ ದೇಹ ಸಿಲುಕಿದ್ದು, ಇಂದು ಪತ್ತೆಯಾಗಿದೆ. ಈ ಹಿನ್ನೆಲೆ ತಕ್ಷಣವೇ ಪರಿಹಾರವಾಗಿ 5 ಲಕ್ಷ ರೂ. ವಿತರಣೆ ಮಾಡಲಾಯಿತು. 

ಸಿದ್ದು ಕೆರಮಗಿ, ಕಡಣಿ ಗ್ರಾಮ ಪಂಚಾಯತಿ ಸದಸ್ಯರ ಪುತ್ರ. ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದ್ದಿದ್ದು, ಹೊಲದಲ್ಲಿ ಕಾಯಿಪಲ್ಯ ತರಲು ಹೋಗಿದ್ದರು. ಈ ವೇಳೆ ಟಂ ಟಂ ವಾಹನ ಸಿಕ್ಕಿಬಿದ್ದಿರುವುದನ್ನು ಹೊರ ತೆಗೆಯಲು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲಾಗಿತ್ತು. ಆದರೆ ಜೋರಾದ ಮಳೆಗೆ ಹಳ್ಳ ತುಂಬಿತ್ತು.

ಹೀಗಾಗಿ ಟ್ರ್ಯಾಕ್ಟರ್ ನೀರಿನ ರಭಸಕ್ಕೆ ನೀರಲ್ಲಿ ಹರಿದು ಹೋಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ತುಂಬಾ ಗರ್ಭಿಣಿ ಮೇಲೆ ಹರಿದ ಟ್ರಕ್!