Select Your Language

Notifications

webdunia
webdunia
webdunia
Tuesday, 15 April 2025
webdunia

ಗಾಂಜಾ ಕೇಸ್ ನಲ್ಲಿ ಐವರು ಅರೆಸ್ಟ್

ಅಕ್ರಮ ಗಾಂಜಾ
ಗದಗ , ಶನಿವಾರ, 12 ಸೆಪ್ಟಂಬರ್ 2020 (18:40 IST)
ಅಕ್ರಮ ಗಾಂಜಾ ಮಾರಾಟ ಮತ್ತು ಉತ್ಪಾದನೆ ಮಾಡುತ್ತಿದ್ದ ಐವರನ್ನು ಅರೆಸ್ಟ್ ಮಾಡಲಾಗಿದೆ.

ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನು ಬಂಧಿಸಿದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಕಡ್ಡಿಯವರ ಪ್ಲಾಟ್ ನಲ್ಲಿ ನಡೆದಿದೆ.

ಪಟ್ಟಣದ ನಿವಾಸಿಗಳಾದ  ಈರಪ್ಪ ಯಮನಪ್ಪ ರಾಠೋಡ, ವಾಸೀಮ ಅಮೀನಸಾಬ ಬಂಗಾರಗುಂಡಿ, ವೀರೇಶ ಪ್ರಭಾಕರ ಪುಡೂರ, ವಿರೇಶ ಗೋವಿಂದಪ್ಪ ದ್ಯಾವನಕೊಂಡಿ ಹಾಗೂ ಗದಗ ನಗರದ ನಿವಾಸಿ ಶಿವಕುಮಾರ ಕಾಶಪ್ಪ ಬೆಡಗೇರಿ ಬಂಧಿತ ಆರೋಪಿಗಳು.

 ಈರಪ್ಪ ರಾಠೋಡ ಎಂಬುವರು ತಮ್ಮ ಮನೆಯಲ್ಲಿ ಮಾರಾಟ ಮತ್ತು ಗಾಂಜಾ ಬೆಳೆಯುತ್ತಿದ್ದರು ಎನ್ನುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಬಂಧಿತ ಆರೋಪಿಗಳಿಂದ 500 ಗ್ರಾಂ ಗಾಂಜಾ ಹಾಗೂ 3  ಕೆ.ಜಿ  ಹಸಿ ಗಾಂಜಾ ಮತ್ತು ಎರಡು ಬೈಕ್ ಸಹಿತ 2 ಲಕ್ಷ 85 ಸಾವಿರ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊ೦ಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆ ದೇವಸ್ಥಾನದಲ್ಲಿ ಹೀಗಾ ಆಗೋದು?