ಬಿಸಿಲುನಗರಿಯಲ್ಲಿ ಮತ್ತೆ ಮೊಳಗಿದ ಗುಂಡಿನ ಮೊರೆತ

Webdunia
ಶುಕ್ರವಾರ, 19 ಅಕ್ಟೋಬರ್ 2018 (19:57 IST)
ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ ಮೊಳಗಿದ ಗುಂಡಿನ ಮೊರೆತದಿಂದ ಇಬ್ಬರು ಆರೋಪಿಗಳ ಬಂಧನವಾಗಿದೆ.

ಕಲಬುರ್ಗಿ ನಗರದ ಪಬ್ಲಿಕ್ ಗಾರ್ಡನ್ ನಲ್ಲಿ ಆರೋಪಿಗಳ ಮೇಲೆ ಪೊಲೀಸ್ ರಿಂದ ಗುಂಡಿನ ದಾಳಿ ನಡೆದಿದೆ. ಉಮೇಶ ಮಾಲಗೆ ಮತ್ತು ಬಾಬು ಅಲಿಯಾಸ್ ಬಾಬ್ಯಾ ಎನ್ನುವ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರೂ ಆರೋಪಿಗಳು ಮೆಕ್ಯಾನಿಕ್ ಆಗಿದ್ದ ರಾಮಕೃಷ್ಣ ಎನ್ನುವಾತನನ್ನು ಕಿಡ್ನಾಪ್ ಮಾಡಿ ಒಂದು ಲಕ್ಷ ರೂಪಾಯಿ ವಸೂಲಿ ಮಾಡಿದ್ದರು. ದರೋಡೆಕೋರರು ಪಬ್ಲಿಕ್ ಗಾರ್ಡನ್ ನಲ್ಲಿ ಇದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲು ಹೋಗಿದ್ದ ಪೊಲೀಸ್ ರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.

ಆತ್ಮರಕ್ಷಣೆಗಾಗಿ ಚೌಕ್ ಪೊಲೀಸ್ ಠಾಣೆಯ ಪಿಎಸ್ ಐ ಹಿರೇಮಠ ರಿಂದ ಆರೋಪಿಗಳ ಮೇಲೆ ಎರಡು ಸುತ್ತು ಫೈರಿಂಗ್ ನಡೆದಿದೆ. ಆರೋಪಿಗಳ ಕಾಲಿಗೆ ಗಾಯವಾಗಿದ್ದು,  ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪಿಎಸ್ ಐ ಅಕ್ಕಮಹಾದೇವಿ, ಪೇದೆಗಳಾದ ರಾಜಕುಮಾರ್, ನಿಂಗಪ್ಪರಿಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ  ಆರೋಪಿಗಳು ನಿನ್ನೆ ರಾತ್ರಿಯೂ ಕೂಡ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಇಬ್ಬರನ್ನು ತಡೆದು ದರೋಡೆ ಮಾಡಿ ಪರಾರಿಯಾಗುತ್ತಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ವಿಧಾನಸಭೆ ಚುನಾವಣೆ, ನಾಳೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಮಕ್ಕಳು ಸೇರಿದಂತೆ 17ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರ್ಯ ಗುಂಡೇಟಿಗೆ ಬಲಿ

ನಿಮ್ಮ ಮಗನೇ ಚಿನ್ನ ಕದ್ದಿದ್ದು ಎಂದಿದ್ದಕ್ಕೆ ಜೀವನೇ ತೆಗೆದ್ಬಿಟ್ಟ

ಇವರಿಗಿಂತ, ಇಂದಿರಾ ಗಾಂಧಿಗೆ ಧೈರ್ಯ ಜಾಸ್ತಿಯಾಗಿತ್ತು: ರಾಹುಲ್ ಗಾಂಧಿ ಕಿಡಿ

ಮಗಳ ಶವ ಮುಂದಿಟ್ಟು ಲಂಚಕ್ಕೆ ಬೇಡಿಕೆ: ತಂದೆಯ ಭಾವುಕ ಪೋಸ್ಟ್ ಬೆನ್ನಲ್ಲೇ ಪೊಲೀಸರಿಗೆ ಶಾಕ್‌

ಮುಂದಿನ ಸುದ್ದಿ
Show comments