Publish Date: Tue, 09 Oct 2018 (15:28 IST)
Updated Date: Tue, 09 Oct 2018 (15:31 IST)
ರಾತ್ರಿ ವೇಳೆ ಲಾರಿ ಅಡ್ಡಗಟ್ಟಿ ಸುಲಿಗೆ ನಡೆಸುತ್ತಿದ್ದ ಖದೀಮರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಬೀದರ್ ಜಿಲ್ಲೆಯ ಹುಮನಾಬಾದ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 3 ಜನ ಸುಲಿಗೆಕೋರರ ಬಂಧನ ಮಾಡಿದ್ದಾರೆ.
ಮಲ್ಲುರೆಡ್ಡಿ (23), ಯುನೂಸ್ (25), ಮಹ್ಮದ್ ಜಹಾಂಗೀರ್ (25) ಬಂಧಿತ ಆರೋಪಿಗಳಾಗಿದ್ದಾರೆ. ಹುಮನಾಬಾದ್ ಬೀದರ್ ಮಾರ್ಗದ ಅರಣ್ಯಪ್ರದೇಶದಲ್ಲಿ ಸುಲಿಗೆ ನಡೆಸುತ್ತಿದ್ದರು.
ಬಂಧಿತರಿಂದ 3 ಚಾಕು, ಎರಡು ಮೊಬೈಲ್ ಹಾಗೂ ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕಳೆದ ತಿಂಗಳು ಹುಮನಾಬಾದ್ ತಾಲೂಕಿನ ಕಬೀರಾಬಾದ್ ವಾಡಿ ಬಳಿ ನಡೆದಿದ್ದ ಸುಲಿಗೆ ಪ್ರಕರಣದಲ್ಲಿ
ಹಣಮಂತರೆಡ್ಡಿ ಎಂಬುವರ ಲಾರಿ ಅಡ್ಡಗಟ್ಟಿ ತೋಗರಿ ಬೆಳೆ ಸುಲಿಗೆ ಮಾಡಿದ್ದ ಖದೀಮರು ಇವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದುವರೆ ಲಕ್ಷ ರೂ. ಮೌಲ್ಯದ ತೋಗರಿ ಬೆಳೆ ಲಾರಿ ಸಮೇತ ಸುಲಿಗೆ ಮಾಡಿದ್ದರು. ಈ ಕುರಿತು ಹುಮನಾಬಾದ್ ಪೊಲೀಸ್ ಠಾಣಾವ್ಯಾಪ್ತಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳು ಮೂರು ವರ್ಷದಿಂದ ಸುಲುಗೆ ನಡೆಸುತ್ತಿದ್ದರು ಎನ್ನಲಾಗಿದೆ.