Select Your Language

Notifications

webdunia
webdunia
webdunia
webdunia

ಶೋಕಿಗಾಗಿ ಕಳ್ಳತನ ಮಾಡುತ್ತಿದ್ದವರು ಅಂದರ್

ಶೋಕಿಗಾಗಿ ಕಳ್ಳತನ ಮಾಡುತ್ತಿದ್ದವರು ಅಂದರ್
ನೆಲಮಂಗಲ , ಶನಿವಾರ, 25 ಆಗಸ್ಟ್ 2018 (18:56 IST)
ಶೋಕಿಗಾಗಿ ಅಡ್ಡದಾರಿ ಹಿಡಿದು ಒಂಟಿಯಾಗಿ ಓಡಾಡುವ ಜನರಿಗೆ ಮಾರಕಾಸ್ತ್ರಗಳಿಂದ ಹೆದರಿಸಿ ಕಳ್ಳತನ ಮಾಡುತ್ತಿದ್ದವರ ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶೋಕಿಗಾಗಿ ಅಡ್ಡದಾರಿ ಹಿಡಿದು ಒಂಟಿಯಾಗಿ ಓಡಾಡುವ ಜನರಿಗೆ ಮಾರಕಾಸ್ತ್ರಗಳಿಂದ ಹೆದರಿಸಿ ಹಣ, ಒಡವೆಗಳನ್ನ ದೋಚುತ್ತಿದ್ದ ಐವರು ದರೋಡೆಕೋರರನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಪೊಲೀಸರು ಐವರನ್ನ ಬಂಧಿಸಿದ್ದಾರೆ.

ಇನ್ನೂ ಇದಾಯತ್, ತನ್ವೀರ್, ಮನೋಜ್, ಭರತ್, ಮೋಹನ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಲಾಂಗು, ಮಚ್ಚು ಇನ್ನಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.






Share this Story:

Follow Webdunia kannada

ಮುಂದಿನ ಸುದ್ದಿ

ರೈತ ಸಂಘದಿಂದ ನೆರೆ ಸಂತ್ರಸ್ತರಿಗೆ ನೆರವು